More

    ಇಂದಿನಿಂದ ಆಸ್ಟ್ರೇಲಿಯನ್ ಓಪನ್: ಪುರುಷರ ಟೆನಿಸ್​ನಲ್ಲಿ ಬಿಗ್ ಥ್ರೀ ಪ್ರಾಬಲ್ಯಕ್ಕೆ ಬೀಳಲಿದೆಯೇ ಕೊನೆ?

    ಮೆಲ್ಬೋರ್ನ್: ಇದು ಹೊಸ ದಶಕದ ಆರಂಭವಿರಬಹುದು. ಆದರೆ, ಟೆನಿಸ್ ಜಗತ್ತಿನ ಹೊಸ ದಶಕದ ಆರಂಭವೆಂದು ಅನಿಸುವುದಿಲ್ಲ. 21ರ ದಶಕದ ಮೊಟ್ಟ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್​ಗೆ ಸೋಮವಾರ ಚಾಲನೆ ಸಿಗಲಿದ್ದು, ತಲಾ ಏಳು ಬಾರಿ ಚಾಂಪಿಯನ್​ಗಳಾಗಿರುವ ಸೆರ್ಬಿಯಾದ ಹಾಲಿ ಚಾಂಪಿಯನ್ 32 ವರ್ಷದ ನೊವಾಕ್ ಜೋಕೊವಿಕ್ ಹಾಗೂ 23 ಗ್ರಾಂಡ್ ಸ್ಲಾಂಗಳ ಒಡತಿ 38ರ ಸೆರೇನಾ ವಿಲಿಯಮ್್ಸ ಫೇವರಿಟ್​ಗಳಾಗಿ ಕಣಕ್ಕಿಳಿಯಲಿದ್ದಾರೆ.

    ಇಂದಿನಿಂದ ಆಸ್ಟ್ರೇಲಿಯನ್ ಓಪನ್: ಪುರುಷರ ಟೆನಿಸ್​ನಲ್ಲಿ ಬಿಗ್ ಥ್ರೀ ಪ್ರಾಬಲ್ಯಕ್ಕೆ ಬೀಳಲಿದೆಯೇ ಕೊನೆ?ಪುರುಷರ ಟೆನಿಸ್​ನಲ್ಲಿ ಬಿಗ್ ಥ್ರೀ ಪಾರಮ್ಯ ಹಾಗೂ ಮಹಿಳಾ ಟೆನಿಸ್​ನಲ್ಲಿ ಸೆರೇನಾ ವಿಲಿಯಮ್ಸ್​ರ ಪ್ರಭುತ್ವವನ್ನು ಮುರಿಯುವ ಸ್ಟಾರ್​ಗಳ ಹುಡುಕಾಟ ನಡೆಸುವ ಹಾದಿಯಲ್ಲಿ ಹಲವು ವರ್ಷ ಕಳೆದಿವೆ. ಹೊಸ ದಶಕದಲ್ಲಿ ಈ ಬದಲಾವಣೆ ಸಿಗಬಹುದೇ ಎನ್ನುವುದೇ ಎಲ್ಲರಲ್ಲಿರುವ ಪ್ರಶ್ನೆಯಾಗಿದೆ.

    ಗ್ರಾಂಡ್ ಸ್ಲಾಂ ಫೈನಲ್​ಗಳಲ್ಲಿ ರಾಫೆಲ್ ನಡಾಲ್, ರೋಜರ್ ಫೆಡರರ್ ಹಾಗೂ ನೊವಾಕ್ ಜೋಕೋವಿಕ್​ರಂಥ ಆಟಗಾರರು ಮುಖಾಮುಖಿಯಾಗುವುದನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಇವರಿಗೆ ಗ್ರಾಂಡ್ ಸ್ಲಾಂ ಫೈನಲ್​ನಲ್ಲಿ ನಿರಂತರವಾಗಿ ಸವಾಲೊಡ್ಡುವಂಥ ಆಟಗಾರರು ಪ್ರಸ್ತುತ ಕಾಣುತ್ತಿಲ್ಲ. ಹೊಸ ದಶಕದಲ್ಲಿ ಅದು ಸಾಧ್ಯವಾಗಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲಿದೆ. ಆಸ್ಟ್ರಿಯಾದ ಡೊಮಿನಿಕ್ ಥೀಮ್ ಗ್ರೀಸ್​ನ ಸ್ಟೆಫಾನೋಸ್ ಸಿಸಿಪಾಸ್ ಹಾಗೂ ರಷ್ಯಾದ ಡೆನಿಲ್ ಮೆಡ್ವೆಡೇವ್​ಗೆ

    ಭವಿಷ್ಯದ ತಾರೆಯರಾಗುವ ಎಲ್ಲ ಅವಕಾಶಗಳಿವೆ. ಇನ್ನು ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನಿಂದ ಉಂಟಾದ ಮಲಿನ ಗಾಳಿಯ ಭೀತಿಯಲ್ಲಿಯೇ ಈ ಬಾರಿ ಆಸ್ಟ್ರೇಲಿಯನ್ ಓಪನ್ ಸಾಗಲಿದೆ. ಜೋಕೊವಿಕ್, ರಾಫೆಲ್ ನಡಾಲ್ ಹಾಗೂ ರೋಜರ್ ಫೆಡರರ್​ಗೆ ಆಸ್ಟ್ರೇಲಿಯನ್ ಓಪನ್ ಗೆಲುವು ವಿಶೇಷ ದಾಖಲೆಗಳನ್ನು ನೀಡಲಿದೆ. ನೊವಾಕ್ ಜೋಕೊವಿಕ್ ಚಾಂಪಿಯನ್ ಆದಲ್ಲಿ, 8 ಬಾರಿ ಆಸ್ಟ್ರೇಲಿಯನ್ ಓಪನ್ ಜಯಿಸಿದ ಅಪರೂಪದ ದಾಖಲೆ ಮಾಡಲಿದ್ದಾರೆ. ಹಾಗೇನಾದರೂ ರಾಫೆಲ್ ನಡಾಲ್ ಜಯಿಸಿದರೆ, ಪ್ರತಿ ಗ್ರಾಂಡ್ ಸ್ಲಾಂ ಅನ್ನು ಎರಡು ಬಾರಿ ಜಯಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಳ್ಳುವುದು ಮಾತ್ರವಲ್ಲ, ರೋಜರ್ ಫೆಡರರ್​ರ 20 ಗ್ರಾಂಡ್ ಸ್ಲಾಂ ಗೆಲುವಿನ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಇನ್ನು ರೋಜರ್ ಫೆಡರರ್ ಜಯಿಸಿದರೆ, 21ನೇ ಗ್ರಾಂಡ್ ಸ್ಲಾಂ ವಿಜಯದ ದಾಖಲೆಯನ್ನು ಮಾಡಲಿದ್ದಾರೆ.-ಏಜೆನ್ಸೀಸ್

    ಮೊದಲ ದಿನದ ಪಂದ್ಯಗಳು

    ಮಹಿಳಾ ವಿಭಾಗ

    ಆಶ್ಲೆಗ್ ಬಾರ್ಟಿ-ಲೆಸಿಯಾ ಸುರೆಂಕೋ

    ನವೋಕಿ ಒಸಾಕ-ಮಾರಿಸ್ ಬುಜ್ಕೋವಾ

    ಸೆರೇನಾ ವಿಲಿಯಮ್್ಸ-ಅನಸ್ತಾಸಿಯಾ ಪೊಟಪೋವಾ

    ಪುರುಷರ ವಿಭಾಗ

    ಜೋಕೊವಿಕ್-ಜಾನ್ ಲೀನಾರ್ಡ್

    ರೋಜರ್ ಫೆಡರರ್-ಸ್ಟೀವ್ ಜಾನ್ಸನ್

    ಸೆರೇನಾಗೆ ಒಲಿಯಲಿದೆಯೇ ನಂ.24?

    ಸೆರೇನಾ ವಿಲಿಯಮ್್ಸ ಮತ್ತೊಮ್ಮೆ ಗರಿಷ್ಠ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಸಾಧನೆಯನ್ನು ಸರಿಗಟ್ಟುವ ನಿಟ್ಟಿನಲ್ಲಿ ಹೋರಾಟ ನಡೆಸಲಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ ಗರಿಷ್ಠ 24 ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಸೆರೇನಾ ಇಲ್ಲಿ ಪ್ರಶಸ್ತಿ ಜಯಿಸಿದರೆ, ಈ ದಾಖಲೆಯನ್ನು ಸರಿಗಟ್ಟಲಿದ್ದು, ವರ್ಷಾಂತ್ಯದ ವೇಳೆಗೆ ತಮ್ಮದೇ ದಾಖಲೆಯನ್ನು ನಿರ್ವಿುಸುವ ಅವಕಾಶ ಪಡೆದುಕೊಳ್ಳಲಿದ್ದಾರೆ. ಇವರಿಗೆ ವಿಶ್ವ ನಂ.1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ, ಜಪಾನ್​ನ ನವೋಮಿ ಒಸಾಕ, ಎಲಿನಾ ಸ್ವಿಟೋಲಿನಾ, ಕ್ಯಾರೋಲಿನಾ ಪ್ಲಿಸ್ಕೋವಾರಿಂದ ಸವಾಲನ್ನು ಎದುರಿಸಲಿದ್ದಾರೆ. ಸೆರೇನಾ ವಿಲಿಯಮ್್ಸ ಕ್ವಾರ್ಟರ್​ಫೈನಲ್ ಹಂತದಲ್ಲಿ ನವೋಮಿ ಒಸಾಕರನ್ನು ಎದುರಿಸುವ ಡ್ರಾ ಪಡೆದುಕೊಂಡಿದ್ದಾರೆ. 42 ವರ್ಷಗಳ ಬಳಿಕ ತವರಿನ ಗ್ರಾಂಡ್ ಸ್ಲಾಂ ಟೂರ್ನಿಯನ್ನು ಗೆದ್ದ ಆಟಗಾರ್ತಿ ಎನಿಸಿಕೊಳ್ಳುವ ಹಾದಿಯಲ್ಲಿ ಆಶ್ಲೆಗ್ ಬಾರ್ಟಿ ಪ್ರಯತ್ನ ನಡೆಸಲಿದ್ದಾರೆ. 2019ರಲ್ಲಿ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಚೊಚ್ಚಲ ಗ್ರಾಂಡ್ ಸ್ಲಾಂ ಗೆದ್ದಿದ್ದ ಬಾರ್ಟಿ, ವರ್ಷದ ಕೊನೆಯಲ್ಲಿ ಡಬ್ಲ್ಯುಟಿಎ ಫೈನಲ್ಸ್ ಚಾಂಪಿಯನ್ ಆಗಿದ್ದರು. 8ರ ಘಟ್ಟದಲ್ಲಿ ಮ್ಯಾಡಿಸನ್ ಕೀಯ್್ಸ ಅಥವಾ ಪೆಟ್ರಾ ಕ್ವಿಟೋವಾರನ್ನು ಅವರು ಎದುರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts