ಆತಿಥೇಯ ಇಂಗ್ಲೆಂಡ್​​ ಪಡೆಗೆ ಕಡಿಮೆ ಮೊತ್ತದ ಗುರಿ ನೀಡಿದ ಹಾಲಿ ಚಾಂಪಿಯನ್​​​​​

ಬರ್ಮಿಂಗ್​​ಹ್ಯಾಂ: ಇಂಗ್ಲೆಂಡ್​ನ ಕ್ರಿಸ್​ ವೋಕ್ಸ್​​​ ಹಾಗೂ ಆದಿಲ್​ ರಶೀದ್​ ಅವರ ಶಿಸ್ತುಬದ್ಧ ಬೌಲಿಂಗ್​​ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್​ನ ಎರಡನೇ ಸೆಮಿಫೈನಲ್​ನಲ್ಲಿ ಆಂಗ್ಲ ಪಡೆಗೆ 224 ರನ್​ಗಳ ಗುರಿ ನೀಡಿತು.

ಇಲ್ಲಿನ ಎಜ್​ಬಾಸ್ಟನ್ ಕ್ರೀಡಾಂಗಣದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಆಸೀಸ್​ ಪಡೆ 49 ಓವರ್​ಗಳಲ್ಲಿ ಆಲೌಟ್​ ಆಗುವ ಮೂಲಕ 223 ರನ್​​ ಗಳಿಸಿದೆ.

ಆರಂಭಿಕರಾದ ಡೇವಿಡ್​​ ವಾರ್ನರ್​​​ (9) ಹಾಗೂ ನಾಯಕ ಆ್ಯರೋನ್​ ಫಿಂಚ್​​ (0) ಶೀಘ್ರ ಔಟಾದರೆ, ಸ್ಫೋಟಕ ಬ್ಯಾಟ್ಸ್ಮನ್​​ ಸ್ಟೀವ್​​ ಸ್ಮಿತ್​ ತಮ್ಮ ಬಿರುಸಿನ ಬ್ಯಾಟಿಂಗ್​ನಿಂದ 85 ರನ್​ ಗಳಿಸುವ ಮೂಲಕ ತಂಡವನ್ನು 200ರ ಗಡಿ ದಾಟಿಸಿದರು. ಅವರಿಗೆ ವಿಕೆಟ್​ ಕೀಪರ್​​ ಆಲೆಕ್ಸ್​ ಕ್ಯಾರಿ (46) ಸಾಥ್​ ನೀಡುವಲ್ಲಿ ಸಫಲರಾದರು. ಆದರೆ, ಉಳಿದ ಬ್ಯಾಟ್ಸ್​​ಮನ್​ಗಳು ತೀರಾ ಕಳಪೆ ಆಟದೊಂದಿಗೆ ಶೀಘ್ರ ವಿಕೆಟ್​ ಕಳೆದುಕೊಂಡು ಪೆವಿಲಿಯನ್​ ಪೆಡೆರ್​​ ನಡೆಸಿದರು.

ಇಂಗ್ಲೆಂಡ್​ ಪರ ಬೌಲಿಂಗ್​ ಮಾಡಿದ ಕ್ರಿಸ್​ ವೋಕ್ಸ್​​​​ ಹಾಗೂ ಆದಿಲ್​ ರಶೀದ್​​​​​ ತಲಾ 3 ವಿಕೆಟ್​ ಪಡೆದರೆ, ಜೋಫ್ರಾ ಆರ್ಚರ್​​​​ 2 ಹಾಗೂ ಮಾರ್ಕ್​ ವುಡ್​​​​​ ಒಂದು ವಿಕೆಟ್​ ಕಬಳಿಸಿ ಪಾರಮ್ಯ ಮೆರೆದರು.

ಒಂದು ವೇಳೆ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾವನ್ನು ಸೋಲಿಸಿ ಇಂಗ್ಲೆಂಡ್​ ಫೈನಲ್​ ಪ್ರವೇಶಿಸಿದರೆ, ಅಂತಿಮ ಸುತ್ತಿನಲ್ಲಿ ನ್ಯೂಜಿಲೆಂಡ್​ ಅನ್ನು ಎದುರಿಸಲಿದೆ. ಉಭಯ ತಂಡಗಳಲ್ಲಿ ಯಾವುದೇ ತಂಡ ಟ್ರೋಫಿ ಜಯಸಿದರೆ, ವಿಶ್ವಕಪ್​​ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಯ ಸಾಧಿಸಿದ ತಂಡವಾಗಿ ದಾಖಲೆ ಸೃಷ್ಟಿಸಲಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *