ವಿವಿಧೆಡೆ ಕಮಲ ಪಡೆ ಪ್ರಚಾರ

ಔರಾದ್ ಗ್ರಾಮೀಣ: ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಠಾಣಾಕುಶನೂರ ಗ್ರಾಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಚಾರ ನಡೆಸಿದರು. ನೂರಾರು ಕಾರ್ಯಕರ್ತರು ಮನೆ, ಮನೆಗೆ ತೆರಳಿ ಮತಯಾಚಿಸಿ, ಖೂಬಾ ಔರಾದ್ ತಾಲೂಕಿನ ಮಗ. ಅವರಿಗೆ ಈ ಭಾಗದ ಮತದಾರರು ಹೆಚ್ಚಿನ ಲೀಡ್ ಕೊಟ್ಟು ಭಾರಿ ಮತಗಳ ಅಂತರದಿಂದ ಗೆಲ್ಲ್ಲಿಸಬೇಕು ಎಂದು ಕೋರಿದರು.

ಬಾಬುರಾವ ವಾಗಮೋಡೆ, ಶಿವಕುಮಾರ ಸಜ್ಜನಶೆಟ್ಟೆ, ಧನರಾಜ ಜೀಗರ್ೆ, ಶಿವರಾಜ ಬೋಚರೆ, ರಾಜಕುಮಾರ ಸಜ್ಜನಶೆಟ್ಟೆ, ಗಿರೀಶ್ ವಡೆಯರ್, ಸತೀಶ್ ಜಿಗರ್ೆ, ಓಂಕಾರ ಸ್ವಾಮಿ, ಪ್ರಭುರಾವ ಜೀರ್ಗೆ, ಉಮಾಕಾಂತರಾವ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಮಲ್ಲಪ್ಪ ಸಜ್ಜನಶೆಟ್ಟೆ, ರಮೇಶ ಜೀರ್ಗೆ, ರಮೇಶ ಬೋಚರೆ, ಅನೀಲ ಜೀರ್ಗೆ, ರಮೇಶ ಬೊಬಚಡೆ, ಭದ್ರು ಸ್ವಾಮಿ, ದೇವಿದಾಸ ಮೇತ್ರೆ, ಬ್ರಹ್ಮಾನಂದ ಕೊರೆ ಇತರರಿದ್ದರು.

ಈ ಮಧ್ಯೆ ಬಿಜೆಪಿ ತಾಲೂಕು ಎಸ್ಸಿ ಮೋರ್ಚಾ ಅಧ್ಯಕ್ಷ ಸಂಜುಕುಮಾರ ಮಾನಕರಿ, ಯುವ ಮೋರ್ಚಾ ಕಾರ್ಯದರ್ಶಿ ನಾರಾಯಣ ಕಾಂಬ್ಳೆ ನೇತೃತ್ವದಲ್ಲಿ ಖೂಬಾ ಪರವಾಗಿ ಪಕ್ಷದ ಮುಖಂಡರು ತಾಲೂಕಿನ ಸೋನಾಳ, ಚಾಂಡೇಶ್ವರ, ಕಾಳಗಾಪುರ, ಸೋನಾಳವಾಡಿ, ಖೇಡ್, ಹುಲಸೂರ, ಹೋರಂಡಿ, ಸಂಗಮ, ಡಿಗ್ಗಿ, ಸಾವಳಿ, ತೋರಣಾ, ವಾಡಿ, ಕೋರ್ಯಾಳ, ಬಸನಾಳ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು. ಮೋದಿ ಸಾಧನೆ ವಿವರಿಸಿ ಮತ ಕೋರಿದರು. ಸಂತೋಷ ದಿಂಡೆ, ದೇವಿದಾಸ ಡಾಂಗೆ, ಮಾರುತಿ ಸಿಂಗೂಡೆ ಇತರರಿದ್ದರು.