ವಚನ ಜಾತ್ರೆಗಾಗಿ ಭಾಲ್ಕಿಗೆ ಬನ್ನಿ

ಔರಾದ್: ಡಾ. ಚನ್ನಬಸವ ಪಟ್ಟದ್ದೇವರ ಪುಣ್ಯ ಸ್ಮರಣೋತ್ಸವ ನಿಮಿತ್ತ ಭಾಲ್ಕಿಯಲ್ಲಿ 20 ಮತ್ತು 21ರಂದು ನಡೆಯಲಿರುವ ವಚನ ಜಾತ್ರೆಯಲ್ಲಿ ತಾಲೂಕಿನ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಇಲ್ಲಿಯ ಬಸವ ಗುರುಕುಲ ಸಮುಚ್ಚಯದಲ್ಲಿ ಸೋಮವಾರ ನಡೆದ ಭಿತ್ತಿ ಪತ್ರ ಬಿಡುಗಡೆ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಜೀವಿ ಮನ್ಮಥಪ್ಪ ಹುಗ್ಗೆ, ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಮತ್ತು ವಚನ ಜಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಳ್ಳಬಾರದು ಎಂದರು.

ಕಾಯಕಯೋಗಿ ಟ್ರಸ್ಟ್ ಕಾರ್ಯದಶರ್ಿ ಅನೀಲ ಜಿರೋಬೆ ಮಾತನಾಡಿ, ನಡೆ-ನುಡಿ ಮೂಲಕ ದೇವರು ಹೇಗಿರುತ್ತಾನೆ ಎಂಬುದಕ್ಕೆ ಜೀವಂತ ಉದಾಹರಣೆಯಾಗಿಸಿದ ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಮತ್ತು ವಚನ ಜಾತ್ರೆಯಲ್ಲಿ ಪಾಲ್ಗೊಳ್ಳುವುದೇ ಒಂದು ಭಾಗ್ಯ ಎಂದು ವ್ಯಾಖ್ಯಾನ ಮಾಡಿದರು.

ನಿವೃತ್ತ ಮುಖ್ಯ ಗುರು ಸಿದ್ರಾಮಪ್ಪ ನಿಡೋದೆ, ನಿವೃತ್ತ ಶಿಕ್ಷಕ ಎನ್. ವಿ. ಬಿರಾದಾರ್, ಮುಖ್ಯಗುರು ನಾಗನಾಥ ಶಂಕು, ಪ್ರಶಾಂತ ಸಂಗಮದ್, ಧನರಾಜ ನಿಟ್ಟೂರೆ, ಸತೀಶ ಗಂದಿಗುಡಿ, ನಾಗನಾಥ ಪಾಟೀಲ್ ಇದ್ದರು.

Leave a Reply

Your email address will not be published. Required fields are marked *