More

  ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

  ಯಳಂದೂರು:ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಿ ಎಂದು ಅಂಬಳೆ ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ ಸಲಹೆ ನೀಡಿದರು.
  ಅವರು ಸೋಮವಾರ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನರೇಗಾ ಯೋಜನೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಫಲಾನುಭವಿಗಳ ಮನೆ ಆವರಣದಲ್ಲಿ ಕೊಟ್ಟಿಗೆ ನಿರ್ಮಾಣ, ಸೋಕ್ ಪಿಟ್ ನಿರ್ಮಾಣ ಹಸು, ಕುರಿ ಕೊಟ್ಟಿಗೆ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಮಾಡಲಾಗಿದೆ. ರಸ್ತೆ, ಚರಂಡಿ ನಿರ್ಮಾಣ, ಕೆರೆ, ರಸ್ತೆ ನದಿಯಲ್ಲಿ ಗಿಡ ನೆಡುವುದೂ ಸೇರಿದಂತೆ ಅನೇಕ ಕಾಮಗಾರಿಗಳು ನಡೆದಿವೆ. ಇದರಿಂದ ಸಾವಿರಾರು ಮಾನವ ದಿನಗಳ ಸೃಜನೆಯಾಗಿದೆ. ಲಕ್ಷಾಂತರ ರೂ. ಕೂಲಿ ಮೊತ್ತ ಪಾವತಿಸಲಾಗಿದೆ ಎಂದರು. ನರೇಗಾ ಯೋಜನೆಯ ಲೆಕ್ಕ ಪರಿಶೋಧಕ ನಾರಾಯಣ ಮಾತನಾಡಿ ಅಂಬಳೆ ಪಂಚಾಯಿತಿಯಲ್ಲಿ 2022 ರ ಏಪ್ರಿಲ್‌ನಿಂದ 2023 ರ ಮಾರ್ಚ್ ವರೆಗೆ 46.32 ಲಕ್ಷ ರೂ.ಕೂಲಿ ಮೊತ್ತ ಸೇರಿದಂತೆ ಒಟ್ಟು 70.26 ಲಕ್ಷ ರೂ. ಹಣವನ್ನು 227 ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ ಎಂದರು.
  ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಗಳಲ್ಲಿ ಹಾಜರಿರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ನೋಡಲ್ ಅಧಿಕಾರಿ ಡಾ. ಶಿವರಾಜು ಪ್ರತಿಕ್ರಿಯಿಸಿ, ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು. ಗ್ರಾಪಂ ಸದಸ್ಯರಾದ ಸಿದ್ದನಾಯಕ, ರಾಜಣ್ಣ, ನಂದರಾಜು, ಪಿಡಿಒ ಮಮತಾ, ಕಾರ್ಯದರ್ಶಿ ಪುಟ್ಟರಾಜು, ಸಿಡಿಪಿಒ ಸಕಲೇಶ್ವರ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts