More

    ಹಲವು ಪ್ರೀತಿಗಳ ಮಿಶ್ರಣ ಲವ್ ಮಾಕ್​ಟೇಲ್

    ‘ಬೇರೆಯವರು ಕೇಳಿದಾಗ ಸಹಾಯ ಮಾಡುವುದು ದೊಡ್ಡತನವಲ್ಲ. ಅವರೊಂದಿಗೆ ಬಾಂಧವ್ಯ-ಪ್ರೀತಿ ಇದ್ದಾಗಲೇ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದದ್ದು ನಟ ಸುದೀಪ್. ಹೀಗೆ ಹೇಳಿದ್ದು ‘ಮದರಂಗಿ’ ಕೃಷ್ಣ ಬಗ್ಗೆ. ಕೃಷ್ಣ ಮೊದಲ ಬಾರಿಗೆ ನಿರ್ದೇಶನ, ನಿರ್ಮಾಣದ ಜತೆಗೆ ಅಭಿನಯಿಸಿರುವ ‘ಲವ್ ಮಾಕ್​ಟೇಲ್’ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಅವರು ಮಾತನಾಡಿದರು.

    ‘ಕೃಷ್ಣನಲ್ಲಿ ಪ್ರಾಮಾಣಿಕತೆ, ಸಾಧಿಸುವ ಛಲ ಇದೆ. ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಟ್ರೇಲರ್, ಹಾಡುಗಳು ಚೆನ್ನಾಗಿ ಬಂದಿವೆ. ರಘು ದೀಕ್ಷಿತ್ ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರಕ್ಕೆ ಸಂಗೀತ ನೀಡಿದ್ದರು. ಆ ಚಿತ್ರದ ಹಾಡುಗಳು ಜನಪ್ರಿಯತೆ ಪಡೆದಿದ್ದವು. ಈಗ ಹೊಸ ತಂಡದ ಚಿತ್ರಕ್ಕೆ ಸಂಗೀತ ನೀಡಿರುವುದು ಖುಷಿ ಸಂಗತಿ. ಈ ಚಿತ್ರಕ್ಕೂ ಯಶಸ್ಸು ಸಿಗಲಿ ಎಂದು ಶುಭ ಹಾರೈಸುವ ಮೂಲಕ ಚಿತ್ರದ ಮೊದಲ ಟಿಕೆಟ್ ನಾನೇ ತೆಗೆದುಕೊಳ್ಳುತ್ತೇನೆ’ ಎಂದರು ಸುದೀಪ್.

    ‘ದುನಿಯಾ ಸೂರಿ ಅವರ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅನುಭವದಿಂದ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇನೆ. ಚಿತ್ರ ಆರಂಭಿಸುವಾಗ ಬರೀ ಒಂದು ಲಕ್ಷ ರೂಪಾಯಿ ನಮ್ಮಲ್ಲಿತ್ತು. ನಟಿ ಮಿಲನಾ ನಾಗರಾಜ್ ಸಹಾಯದಿಂದ ಚಿತ್ರ ಮಾಡಿದ್ದೇನೆ’ ಎಂದರು ನಟ-ನಿರ್ದೇಶಕ-ನಿರ್ವಪಕ ಕೃಷ್ಣ.

    ‘ಪ್ರತಿಯೊಬ್ಬರ ಜೀವನದಲ್ಲಿ ಶಾಲಾ-ಕಾಲೇಜಿನಿಂದ ಮದುವೆ ಆಗುವವರೆಗೂ ನಾಲ್ಕೈದು ಜನರ ಮೇಲಾದರೂ ಲವ್ ಆಗಿರುತ್ತದೆ. ಹೀಗೆ ನಾಲ್ಕೈದು ಪ್ರೀತಿಗಳನ್ನು ಸೇರಿಸಿದಾಗ ಹುಡುಗನ ಜೀವನದಲ್ಲಿ ಏನಾಗುತ್ತದೆ ಎನ್ನುವುದೇ ಕಥೆ. ಚಿತ್ರದಲ್ಲಿ ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಧ್ವನಿ ನೀಡಿದ ನಟ ಸುದೀಪ್ ಹಾಗೂ ಉತ್ತಮ ಸಂಗೀತ ಕೊಟ್ಟಿರುವ ರಘು ದೀಕ್ಷಿತ್ ಅವರಿಗೆ ಸದಾ ಚಿರಋಣಿ’ ಎಂದರು ಕೃಷ್ಣ. ‘ಸಿನಿಮಾದ ಎಲ್ಲ ವಿಭಾಗದಲ್ಲಿಯೂ ಕೆಲಸ ಮಾಡಿದ್ದೇನೆ. ಯಾವುದೇ ವಿಘ್ನವಿಲ್ಲದೆ ಚಿತ್ರದ ಶೂಟಿಂಗ್ ಬೇಗ ಮುಗಿದಿದೆ. ಜ.31ರಂದು ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲರ ಸಹಕಾರದಿಂದ ‘ಲವ್ ಮಾಕ್​ಟೇಲ್’ ಚಿತ್ರ ನಿರ್ವಣವಾಗಿದೆ’ ಎಂದು ನಟಿ-ನಿರ್ವಪಕಿ ಮಿಲನಾ ನಾಗರಾಜ್ ಚಿತ್ರತಂಡದ ಸಹಾಯ ಸ್ಮರಿಸಿಕೊಂಡರು.

    ನಾನು ಸಂಗೀತ ನೀಡಿದ ನಾಲ್ಕನೇ ಚಿತ್ರ ಇದು. ತುಂಬ ಇಷ್ಟಪಟ್ಟು ಒಂದೊಳ್ಳೆಯ ತಂಡದ ಜತೆ ಕೆಲಸ ಮಾಡಿದ್ದೇನೆ. ಚಿತ್ರದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿರುವುದು ಸಂತಸದ ಸಂಗತಿ.

    | ರಘು ದೀಕ್ಷಿತ್ ಸಂಗೀತ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts