ಮಂಡ್ಯದಲ್ಲಿ ಹರಿದಿದೆಯಾ ಹಣದ ಹೊಳೆ? ಪಿ. ರಮೇಶ್​-ಚೇತನ್​ಗೌಡ ಆಡಿಯೋ ವೈರಲ್​

ಮಂಡ್ಯ: ಜಿದ್ದಾಜಿದ್ದಿನ ಕ್ಷೇತ್ರವಾಗಿ ಪರಿವರ್ತಿತವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿದೆ. ಪ್ರತಿ ಮತಗಟ್ಟೆಗೆ ಮತದಾರರಿಗೆ ಹಂಚಲು ಲಕ್ಷಾಂತರ ರೂ. ನೀಡಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಇದಕ್ಕೆ ಪುಷ್ಟಿ ನೀಡುವ ಆಡಿಯೋವೊಂದು ವೈರಲ್​ ಆಗಿದೆ.

ಮಂಡ್ಯ ಸಂಸದ ಶಿವರಾಮೇಗೌಡ ಪುತ್ರ ಚೇತನ್​ ಗೌಡ ಮತ್ತು ಜೆಡಿಎಸ್​ನ ಮಾಜಿ ಮುಖಂಡ ಪಿ. ರಮೇಶ್​ ನಡುವೆ ನಡೆದಿದೆಯೆನ್ನಲಾದ ಸಂಭಾಷಣೆ ತೀವ್ರ ಸಂಚಲನ ಸೃಷ್ಟಿಸಿದೆ. ಇವರಿಬ್ಬರ ಮಾತುಕತೆಯ ನಡುವೆ ಪ್ರತಿ ಬೂತ್​ಗೆ 5 ಲಕ್ಷ ರೂ. ನಂತೆ ಮಂಡ್ಯದಲ್ಲಿ ಒಟ್ಟು 2,800 ಬೂತ್​ಗಳಿಗೆ ಒಟ್ಟು ಸುಮಾರು 150 ಕೋಟಿ ರೂ. ಹಣ ಹಂಚಿಕೆ ಮಾಡಲಾಗಿದೆ. ಜತೆಗೆ ಕೊನೆಯ ಎರಡು ದಿನ ಚಿಕನ್​-ಮಟನ್​ ಹಂಚುವ ವಿಷಯ ಪ್ರಸ್ತಾಪವಾಗಿದೆ.

ಕೆಲವು ದಿನಗಳ ಹಿಂದೆ ಚುನಾವಣೆ ಖರ್ಚಿಗಾಗಿ ಹಣ ಕಳುಹಿಸುವಂತೆ ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ. ಮಾದೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಬಳಿ ಮನವಿ ಮಾಡಿದ್ದರು. ಈ ಆಡಿಯೋ ವೈರಲ್​ ಆಗಿತ್ತು. ಜತೆಗೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಇವರಿಬ್ಬರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

One Reply to “ಮಂಡ್ಯದಲ್ಲಿ ಹರಿದಿದೆಯಾ ಹಣದ ಹೊಳೆ? ಪಿ. ರಮೇಶ್​-ಚೇತನ್​ಗೌಡ ಆಡಿಯೋ ವೈರಲ್​”

  1. ಮಣ್ಣಿನ ಮಗ ಅಂತ ಬಡಾಯಿ ಕೊಚ್ಚಿಕೊಂಡು ಹರಿಶ್ಚಂದ್ರನ
    ವಂಶಸ್ಥರು , ಬೇರೆಯವರೆಲ್ಲ ಕಳ್ಳರು ,ಅಂತ ಕಿರಿಚಿಕೊಳ್ಳೋರ ಕಥೆ,!.

Leave a Reply

Your email address will not be published. Required fields are marked *