Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ವಿಮೆ ಇಲ್ಲದ ವಾಹನ ಹರಾಜು

Saturday, 15.09.2018, 2:05 AM       No Comments

ನವದೆಹಲಿ: ವಿಮಾರಹಿತ ವಾಹನಗಳು ಅಪಘಾತಕ್ಕೊಳಗಾದಲ್ಲಿ ಇವುಗಳನ್ನು 15 ದಿನಗಳೊಳಗೆ ಹರಾಜು ಹಾಕಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ವಿಮಾ ರಹಿತ ವಾಹನವನ್ನು ರಸ್ತೆಗಿಳಿಸುವ ಮುನ್ನ ಸವಾರರು ಎಚ್ಚರಿಕೆ ವಹಿಸಬೇಕಿದೆ. ಕಾರು ಹಾಗೂ ಬೈಕ್​ಗಳ ಥರ್ಡ್ ಪಾರ್ಟಿ ವಿಮಾ ಅವಧಿ ವಿಸ್ತರಿಸಿದ ಬಳಿಕ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ವಾಹನ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.

ಮೋಟಾರು ವಾಹನ ಕಾಯ್ದೆ ನಿಯಮಗಳನ್ನು 12 ವಾರಗಳಲ್ಲಿ ತಿದ್ದುಪಡಿ ಮಾಡಿ ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಬೇಕು ಎಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಿಸಲಾಗಿದೆ. ಈ ನಿಯಮ ಈಗಾಗಲೇ ದೆಹಲಿಯಲ್ಲಿ ಜಾರಿಯಿದೆ. ಮಧ್ಯಪ್ರದೇಶ, ಬಿಹಾರ ಸೇರಿ ಏಳು ರಾಜ್ಯಗಳಲ್ಲಿ ನಿಯಮ ರೂಪಿಸಲಾಗುತ್ತಿದೆ.

ರಸ್ತೆ ಸುರಕ್ಷತೆಗೆ ಬಲ: ಸುಪ್ರೀಂ ಕೋರ್ಟ್​ನ ಆದೇಶದಿಂದ ರಸ್ತೆ ಸುರಕ್ಷತಾ ನಿಮಯಗಳಿಗೆ ಇನ್ನಷ್ಟು ಬಲ ಬಂದಂತಾಗಿದೆ. ವಿಮೆಯಿಲ್ಲದೇ ವಾಹನ ಚಲಾಯಿಸಿದರೆ ಕಾನೂನು ಸಂಕಷ್ಟದ ಜತೆಗೆ ಆರ್ಥಿಕ ಸಂಕಷ್ಟವೂ ಹೆಚ್ಚಲಿದೆ. ವಿಮಾ ರಹಿತ ವಾಹನದಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸಿದರೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯದು ಎನ್ನುವುದನ್ನು ಕೋರ್ಟ್ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?

ಪಂಜಾಬಿನ ಲುಧಿಯಾನದಲ್ಲಿ ವಿಮಾರಹಿತ ಕಾರೊಂದು ಅಪಘಾತಕ್ಕೀಡಾಗಿ ವಾಹನ ಮಾಲೀಕ ಮೃತಪಟ್ಟಿದ್ದ. ಪತ್ನಿ ಹಾಗೂ ಮಗ ಬಚಾವಾಗಿದ್ದರು. ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ವಿಮಾ ಕಂಪನಿ ಹಾಗೂ ಸರ್ಕಾರಗಳು ನಿರಾಕರಿಸಿದ್ದವು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿ ಆದೇಶ ನೀಡಿದೆ.

ವಿಮಾರಹಿತ ವಾಹನಗಳ ಅಪಘಾತದಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರ ಪರಿಹಾರ ನೀಡಲಾಗದು. ಸರ್ಕಾರ ಅಥವಾ ವಿಮಾ ಕಂಪನಿಗಳಿಗೆ ಇದರ ಜವಾಬ್ದಾರಿ ಇರುವುದಿಲ್ಲ. ಆದರೆ ಅಪಘಾತ ಮಾಡಿದ ಮಾಲೀಕರ ವಾಹನ ಹರಾಜಿನ ಮೂಲಕ ಪರಿಹಾರ ನೀಡಬಹುದಾಗಿದೆ.

| ನ್ಯಾ.ದೀಪಕ್ ಮಿಶ್ರಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

ವಿಮೆ ಬಗ್ಗೆ ಹುಷಾರ್

ಹೊಸ ಬೈಕ್ ಹಾಗೂ ಕಾರುಗಳ ಖರೀದಿ ಸಂದರ್ಭದಲ್ಲಿಯೆ ಕ್ರಮವಾಗಿ 5 ಹಾಗೂ 3 ವರ್ಷಗಳ ಥರ್ಡ್ ಪಾರ್ಟಿ ವಿಮೆ ಕಡ್ಡಾಯ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದೆ. ಈಗ ವಿಮಾ ರಹಿತ ವಾಹನಗಳ ಕುರಿತ ಆದೇಶವು ವಾಹನ ಮಾಲೀಕರು ಇನ್ನಷ್ಟು ಹುಷಾರ್ ಆಗಿರಬೇಕು ಎನ್ನುವುದನ್ನು ಸ್ಪಷ್ಟಪಡಿಸಿದೆ. ವಿಮಾ ರಹಿತ ವಾಹನಗಳ ಅಪಘಾತ ಹೆಚ್ಚಳ ಹಾಗೂ ಸಂತ್ರಸ್ತರ ನೋವಿನ ಹಿನ್ನೆಲೆಯಲ್ಲಿ ಇಂತಹ ಆದೇಶಗಳು ಬರುತ್ತಿವೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

Back To Top