ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯವಾದಿಗಳ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಬಂಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಬೆಳಗಾವಿ ನ್ಯಾಯವಾದಿಗಳ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ವಿಜಯಪುರ ಜಿಲ್ಲೆಯ ಇಂಡಿ ಹಾಗೂ ರಾಯಬಾಗದಲ್ಲಿ ಇಬ್ಬರು ನ್ಯಾಯವಾದಿಗಳ ಮೇಲೆ ಸಾಮಾಜಿಕ ತಾಣದಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಹರಿಬಿಡಲಾಗಿದೆ. ಈ ಕುರಿತು ಪದೇ ಪದೆ ನ್ಯಾಯವಾದಿಗಳ ಮೇಲೆ ಸಾರ್ವಜನಿಕವಾಗಿ ಹಲ್ಲೆಗಳು ನಡೆಯುತ್ತಿವೆ. ನ್ಯಾಯವಾದಿಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಸಮಾಜದಲ್ಲಿನ ನೊಂದ ಜನರಿಗೆ ನ್ಯಾಯ ದೊರಕಿಸಿಕೊಡುವ ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಯುತ್ತಿರುವುದರಿಂದ ವಕೀಲರು ಜೀವಭಯದಲ್ಲಿ ಜೀವನ ಸಾಗಿಸುವಂತಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ನ್ಯಾಯವಾದಿಗಳ ವಿರುದ್ಧ ಆರೋಪ ಮಾಡಿರುವ ವ್ಯಕ್ತಿಗಳನ್ನು ಬಂಸಿ ಶಿಕ್ಷೆ ನೀಡಬೇಕು. ನ್ಯಾಯವಾದಿಗಳಿಗೆ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ, ಸಿ.ಟಿ. ಮಜಗಿ, ಗಜಾನನ ಪಾಟೀಲ, ಎಂ.ಬಿ. ಝಿರಲಿ, ಅಪ್ಪಾಸಾಹೇಬ ಘೋರ್ಪಡೆ, ಆರ್.ಸಿ. ಪಾಟೀಲ, ರಮೇಶ ಗುಡ್ಡೋಡಗಿ, ನಿತೀನ್ ಗಾಣಗಿ, ಕಮಲೇಶ ಮಾಯನಾಚ್ಚೆ, ಸರಿತಾ ಶರೆಯಕರ್ ಇತರರಿದ್ದರು.