ಜನಸೇವೆಗೆ ಮೊದಲ ಆದ್ಯತೆ ಇರಲಿ

ಸವದತ್ತಿ: ಜೆಂಟ್ಸ್ ಗ್ರೂಪ್ ಆಫ್ ಸವದತ್ತಿ ಸಂಸ್ಥೆ ಹಲವು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ನಿರತವಾಗಿ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಯುತ್ತಿದ್ದು, ಸಂಸ್ಥೆಯ ಮೂಲ ಉದ್ದೇಶ ಜನಸೇವೆ ಆಗಿದೆ ಎಂದು ನ್ಯಾಯವಾದಿ ಎಂ.ಎಸ್. ಸರ್ವಿ ಹೇಳಿದ್ದಾರೆ.

ಗಂಗಾ ಶಂಕರ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಜೆಂಟ್ಸ್ ವೆಲ್‌ಫೆರ್ ಫೌಂಡೇಷನ್ ಜೆಂಟ್ಸ್ ಗ್ರೂಪ್ ಆಫ್ ಸವದತ್ತಿ 2019ನೇ ವರ್ಷದ ನೂತನ ಪದಾಧಿಕಾರಿಗಳ ಅಧಿಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕುಮಾರೇಶ್ವರ ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಲ್.ಕಳ್ಳಿ ಮಾತನಾಡಿ, ಸಮಾಜದ ಸೇವೆ ಮಾಡುವವರು ಎಷ್ಟೇ ಸಂಕಷ್ಟಗಳು ಎದುರಾದರೂ ಗಟ್ಟಿಯಾಗಿ ನಿಂತುಕೊಳ್ಳಬೇಕು ಎಂದರು. ಪದ್ಮಜಾ ಉಮರ್ಜಿ ಮಾತನಾಡಿದರು. ನಿಕಟ ಪೂರ್ವ ಅಧ್ಯಕ್ಷ ಎಂ.ಬಿ.ದ್ಯಾಮನಗೌಡ್ರ ಸಸಿಗೆ ನೀರು ಹಾಕುವ ಮೂಲಕ ಸಮಾರಂಭ ಉದ್ಘಾಟಿಸಿರು. ನ್ಯಾಯವಾದಿ ಎಂ.ಎಂ.ಯಲಿಗಾರ ಅಧಿಕಾರಿ ಪ್ರದಾನ ಮಾಡಿದರು. ಜೆಂಟ್ಸ್ ಗ್ರೂಪ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಿ.ಎಸ್.ಬಾಂಡೇಕರ ಅವರನ್ನು ಸದಸ್ಯರು ಹಾಗೂ ನಿರ್ದೇಶಕರು ಸನ್ಮಾನಿಸಿದರು.

ಬಳಿಕ ಮಾತನಾಡಿದ ಬಿ.ಎಸ್.ಬಾಂಡೇಕರ, ಜೆಂಟ್ಸ್ ಗ್ರೂಪ್‌ನಿಂದ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕ ಸೇವೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ಡಿ.ಬಿ.ಜವಳಿ, ಜಗದೀಶ ಹಂಪಣ್ಣವರ, ವಿ.ಜಿ.ಪಾಟೀಲ, ರೇಣುಕಾ ಚಚಡಿ, ವೈ.ಎಂ.ಪಾಚ್ತೆ, ಉಪಾಧ್ಯಕ್ಷರಾದ ಸಂಜು ಕವಲಗುಡ್ಡ, ಡಾ.ಹೇಮಂತ ಆರ್.ಬಸ್ನೆ, ಎನ್.ಎಸ್.ಕಿತ್ತೂರ, ಉಮೇಶ ಸರದಾರ, ಅಶೋಕ ಉದಪುಡಿ, ಜಯದೇವ ಮಾಳಗಿ, ಜಾವೇದ ಪಟಾದ, ಶಂಕರ ಹಾಳಮನಿ ಇತರರು ಇದ್ದರು. ನಂತರ ವಿ.ಎಸ್.ಬಾಂಡೇಕರ ಅವರನ್ನು ಎಸ್.ಕೆ.ಹೈಸ್ಕೂಲ್ 1987-88ನೇ ಸಾಲಿನ ಗ್ರೂಪ್‌ನಿಂದ ಸನ್ಮಾನಿಸಲಾಯಿತು.