ವಕೀಲರ ಹಲ್ಲೆ ಮಾಡಿದವರ ಬಂಧಿಸಿ

ಕ್ರಮಕ್ಕೆ ಆಗ್ರಹಿಸಿದ ವಕೀಲರ ಸಂಘ ಒಂದು ದಿನದ ಕಲಾಪದಿಂದ ದೂರ

ಲಿಂಗಸುಗೂರು: ಕಲಬುರಗಿಯಲ್ಲಿ ಕಾರ್ಯನಿರತ ಹಿರಿಯ ವಕೀಲರ ಮೇಲೆ ಉಪ ತಹಸೀಲ್ದಾರ್ ಸಮ್ಮುಖದಲ್ಲಿ ಸಿಬ್ಬಂದಿ ವರ್ಗ ಏಕಾಏಕಿ ಹಲ್ಲೆ ನಡೆಸಿರುವುದು ಖಂಡನೀಯ ಕ್ರಮವಾಗಿದ್ದು, ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಎಸಿ ರಾಜಶೇಖರ ಡಂಬಳರಿಗೆ ವಕೀಲರ ಸಂಘ ಮಂಗಳವಾರ ಮನವಿ ಸಲ್ಲಿಸಿತು.

ಇದಕ್ಕೂ ಮುನ್ನ ವಕೀಲರ ಭವನದಲ್ಲಿ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಪಾಟೀಲ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿದ ವಕೀಲರು, ಒಂದು ದಿನದ ನ್ಯಾಯಾಲಯದ ಕಾರ್ಯ ಕಲಾಪದಿಂದ ದೂರ ಉಳಿಯಲು ನಿರ್ಧರಿಸಿದರು. ವಕೀಲ ರವೀಂದ್ರರ ಮೇಲಾದ ಹಲ್ಲೆಯನ್ನು ಖಂಡಿಸಿದರು. ವಕೀಲರ ರಕ್ಷಣೆ ಕಾಯ್ದೆ ರಚಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಬಳಿಕ ಎಸಿ ಕಚೇರಿ ತೆರಳಿ ಮನವಿ ಸಲ್ಲಿಸಿದರು.