More

    ಅತ್ತಿಬೆಲೆ ಟೋಲ್‌ನಲ್ಲಿ ಫಾಸ್ಟಾೃಗ್ ಗೊಂದಲ, ಸ್ಕ್ಯಾನ್ ಆಗುತ್ತಿಲ್ಲ ಸ್ಟಿಕ್ಕರ್, ಟೋಲ್ ಸಿಬ್ಬಂದಿ ವಾಹನ ಸಮಾರರ ಜಟಾಪಡಿ

    ಆನೇಕಲ್: ಅತ್ತಿಬೆಲೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಟೋಲ್‌ನಲ್ಲಿ ಗುರುವಾರವೂ ಫಾಸ್ಟಾೃಗ್ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ವಾಹನ ಸವಾರರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.

    ಬುಧವಾರ ಬೆಳಗ್ಗೆಯಿಂದ ಅತ್ತಿಬೆಲೆ ಟೋಲ್ ಸಿಬ್ಬಂದಿ ಸಾಕಷ್ಟು ಕ್ರಮ ಕೈಗೊಂಡಿದ್ದರೂ ಗುರುವಾರ ಬೆಳಗ್ಗೆಯೂ ವಾಹನದ ಮೇಲಿನ ಸ್ಟಿಕರ್ ಸ್ಕ್ಯಾನ್ ಆಗದೆ ಸವಾರರು ಪರದಾಡಿದರು.

    ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುವ ಒಂದು ಭಾಗದ 8 ಟೋಲ್ ಗೇಟ್‌ಗಳಲ್ಲಿ ಮೂರರಲ್ಲಿ ಹಣ ಪಾವತಿಸಿದರೆ, ಉಳಿದ ಐದರಲ್ಲಿ ಫಾಸ್ಟ್ಯಾಗ್ ಮೂಲಕ ಹೋಗಲು ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಆದರೆ ವಾಹನಗಳಲ್ಲಿ ಸರಿಯಾಗಿ ಸ್ಕಾನ್ ಆಗದ ಹಿನ್ನೆಲೆಯಲ್ಲಿ ಸಿಬ್ಬಂದಿ ಪರದಾಡಬೇಕಾಗಿತ್ತು.

    ಓಂ ಶಕ್ತಿ ದೇವಾಲಯಕ್ಕೆ ತೆರಳುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಟೋಲ್‌ನಲ್ಲಿ ಸಿಬ್ಬಂದಿ ಜತೆ ಜಗಳಕ್ಕೆ ನಿಲ್ಲಬೇಕಾದ ಪರಿಸ್ಥಿತಿ ಉದ್ಭವಿಸಿತ್ತು. ಶಬರಿಮಲೆ ಮತ್ತು ತಮಿಳುನಾಡಿಗೆ ಹೋಗಬೇಕಾದ ವಾಹನ ಸವಾರರು ಸಿಬ್ಬಂದಿ ಜತೆ ದುಪ್ಪಟ್ಟು ಹಣ ನೀಡುವ ವಿಚಾರಕ್ಕೆ ಗಲಾಟೆ ತೆಗೆದು ಟೋಲ್ ಸಿಬ್ಬಂದಿ ವಾಹನ ಸವಾರರನ್ನು ಸಮಾಧಾನಪಡಿಸಿವುದು ತಲೆನೋವಾಗಿದೆ ಎಂದು ಅಳಲು ತೋಡಿಕೊಂಡರು.

    ಟೋಲ್‌ಗಳಲ್ಲಿ ವಾಹನ ನಿಲ್ಲಿಸಿ ಅರ್ಧಗಂಟೆಯಾದರೂ ಸರಿಯಾಗಿ ಸ್ಕ್ಯಾನ್ ಆಗದೆ ವಾಹನವನ್ನು ಹಿಂದೆ ಹೋಗಿ ಮುಂದೆ ಬಂದು ಮಾಡಬೇಕಾಗುತ್ತದೆ, ಇದರಿಂದ ಸಮಯ ವ್ಯರ್ಥವಾಗುತ್ತಿದ್ದು ಸರಿಯಾದ ಕ್ರಮ ಕೈಗೊಂಡು ನಂತರ ಕಾನೂನು ಜಾರಿಗೆ ತರಬೇಕಾಗಿತ್ತು.
    ಪುರುಷೋತ್ತಮ, ವಾಹನ ಸವಾರ

    ಫಾಸ್ಟ್ಯಾಗ್ ಸ್ಟಿಕ್ಕರ್‌ಗಳಲ್ಲಿ ಲೋಪವಿದೆ, ಸರಿಯಾಗಿ ಸ್ಕ್ಯಾನ್ ಆಗದೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ವಾಹನ ಸವಾರರು ನಮ್ಮ ಮೇಲೆ ಮುಗಿ ಬೀಳುತ್ತಿದ್ದಾರೆ. ನಾವು ನಮ್ಮ ಸಮಸ್ಯೆ ಹೇಳಿಕೊಳ್ಳಲಾಗದೆ ವಾಹನ ಸವಾರರನ್ನು ಸಮಾಧಾನ ಮಾಡಿ ಕಳುಹಿಸುತ್ತಿದ್ದೇವೆ.
    ಟೋಲ್ ಸಿಬ್ಬಂದಿ

    ಸಾಕಷ್ಟು ಕ್ರಮ ಕೈಗೊಂಡರೂ ಸ್ಕ್ಯಾನ್ ವಿಚಾರದಲ್ಲಿ ಕೊಂಚ ತೊಂದರೆಯಾಗುತ್ತಿದೆ. ಎಲ್ಲವನ್ನೂ ಸರಿಪಡಿಸಲಾಗುತ್ತಿದ್ದು ಆದಷ್ಟು ಬೇಗ ಎಲ್ಲರೂ ಾಸ್ಟಾೃಗ್ ಅಳವಡಿಕೆ ಮಾಡಿಕೊಳ್ಳಬೇಕು.
    ತಿಮ್ಮಯ್ಯ, ಅತ್ತಿಬೆಲೆ ಟೋಲ್ ಮ್ಯಾನೇಜರ್

    ಎಲೆಕ್ಟ್ರಾನಿಕ್ ಸಿಟಿ ಟೋಲ್: ಪ್ರತಿದಿನ ಬೆಂಗಳೂರಿನಿಂದ ಬರುವ ವಾಹನಗಳು ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೊಮ್ಮಸಂದ್ರ ಅತ್ತಿಬೆಲೆ ಕೈಗಾರಿಕಾ ಪ್ರದೇಶಕ್ಕೆ ಆಗಮಿಸುವವರು ಇಲ್ಲಿ ಆಗಮಿಸುತ್ತಾರೆ. ಆದರೆ ಮೂರು ದಿನಗಳಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಕಾರ್ಮಿಕರು ಪರದಾಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts