ದರೋಡೆಕೋರರಿಂದ ಮೊಬೈಲ್​ ಕಿತ್ತುಕೊಳ್ಳಲು ಯತ್ನ: ಆಟೋ ಚಾಲಕನಿಗೆ ಸಹಾಯ ಮಾಡಿದ ಮಹಿಳೆ

ಬೆಂಗಳೂರು: ನಗರದಲ್ಲಿ ಮೊಬೈಲ್​ ಕಳ್ಳರ ಹಾವಳಿ ಜಾಸ್ತಿಯಾಗಿದ್ದು, ಆಟೋ ಚಾಲಕನೊಬ್ಬನಿಂದ ದರೋಡೆಕೋರರು ಮೊಬೈಲ್ ಕಿತ್ತುಕೊಳ್ಳಲು​ ಯತ್ನಿಸುವ ವೇಳೆ ಮಹಿಳೆಯೊಬ್ಬಳು ಚಾಲಕನ ಸಹಾಯಕ್ಕೆ ಬಂದು ಚಾಲಕನನ್ನು ರಕ್ಷಿಸಿದ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದ ಬಳಿ ರಾತ್ರಿ ನಡೆದಿದೆ.

ನಾಲ್ವರು ದರೋಡೆಕೋರರು ಸುರೇಶ್ ಎಂಬ ಆಟೋ ಚಾಲಕನ ಬಳಿ ಮೊಬೈಲ್​ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಚಾಲಕ ಮೊಬೈಲ್​ ಕೊಡಲು ನಿರಾಕರಿಸಿದಾಗ ದರೋಡೆಕೋರರು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪೂರ್ಣಿಮಾ ಎಂಬಾಕೆ ಇದನ್ನು ನೋಡಿ ಕೂಗಾಡಿ ಜನತೆಯನ್ನು ಸೇರಿಸಿದ್ದಾರೆ ಹಾಗೂ ಪೊಲೀಸ್​ ಸಹಾಯವಾಣಿ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಜನ ಬರುತ್ತಿದ್ದಂತೆ ದರೋಡೆಕೋರರು ಸ್ಥಳದಿಂದ ಓಡಿಹೋಗಿದ್ದಾರೆ.

ಘಟನೆಯಲ್ಲಿ ಸುರೇಶ್​ ಅವರ ಆಟೋ ಜಖಂ ಗೊಂಡಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ಆಗಮಿಸಿದ ಮಾಗಡಿ ರೋಡ್ ಪೊಲೀಸರು ಪರಿಶೀಲನೆ ನಡೆಸಿದರು. ದರೋಡೆಗೆ ಸಂಬಂಧಿಸಿದ ಒಬ್ಬನ ಚಟುವಟಿಕೆಯನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿ ಪೊಲೀಸರಿಗೆ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *