ಠಾಣೆ ಮೇಲೆ ದಾಳಿಕೋರರೂ ಸೇಫ್! ಪೊಲೀಸರ ಮೇಲೆ ಹಲ್ಲೆ ಮಾಡಿದ್ದವರಿಗೂ ರಿಲೀಫ್ | Attackers

blank

ಬೆಂಗಳೂರು: ರೈತರು, ಕನ್ನಡಪರ ಹೋರಾಟಗಾರರ ವಿರುದ್ಧದ ಕ್ರಿಮಿನಲ್ ದಾವೆಗಳನ್ನು ಅಭಿಯೋಜನೆಯಿಂದ ಪಡೆಯುವ ಜತೆಗೆ ಕಾಂಗ್ರೆಸ್ ಮುಖಂಡರು, ಪೊಲೀಸ್ ಠಾಣೆ ಮೇಲೆ ದಾಳಿಯಿಟ್ಟವರ (Attackers) ವಿರುದ್ಧ ಕೇಸ್​ಗಳನ್ನು ರಾಜ್ಯ ಸರ್ಕಾರ ಹಿಂಪಡೆದು, ಚರ್ಚೆ ಹುಟ್ಟುಹಾಕಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯು 2008ರಿಂದ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 43 ಕ್ರಿಮಿನಲ್ ದಾವೆಗಳನ್ನು ಅಭಿಯೋಜನೆಯಿಂದ ಕೈ ಬಿಡಲು ತೀರ್ವನಿಸಿದೆ. ಕೈಬಿಟ್ಟ ಪ್ರಕರಣಗಳಲ್ಲಿ ಕೋವಿಡ್ ಲಾಕ್​ಡೌನ್, ನಿರ್ಬಂಧ ಕಾಲದ್ದು ಸೇರಿ ರೈತರು, ಕನ್ನಡಪರ ಚಳವಳಿಗಾರರದೇ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ‘ಸಂತೆಯಲ್ಲಿ ಸಮಾರಾಧನೆ’ ರೀತಿ ಕೆಲವು ಗಂಭೀರ ಸ್ವರೂಪದ ಮೊಕದ್ದಮೆಗಳು ಕೈಬಿಟ್ಟ ಪಟ್ಟಿಯಲ್ಲಿ ಸೇರಿರುವುದು ಗಮನಾರ್ಹ.

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನೇರ ಪೊಲೀಸ್ ಠಾಣೆಗೆ ಧಾವಿಸಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿರುವುದು ಇನ್ನೂ ಹಸಿಯಾಗಿದೆ. ಕಾಂಗ್ರೆಸ್ ಮುಖಂಡರ ವಿರುದ್ಧದ ಇದೇ ಮಾದರಿ ದಾವೆಯನ್ನು ಸರ್ಕಾರ ಹಿಂಪಡೆದಿದೆ. ತುಮಕೂರಿನ ಗಾಂಧಿನಗರದ ಸಾರ್ವಜನಿಕ ಸ್ಥಳದಲ್ಲಿ ‘ಪೇ ಎಂಎಲ್​ಎ’ ಭಿತ್ತಿಪತ್ರವನ್ನು ಅಂಟಿಸುತ್ತಿದ್ದ ನಾಲ್ವರನ್ನು ತಿಲಕ್ ಪಾರ್ಕ್ ಠಾಣೆ ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿದ್ದರು. ಚುನಾವಣೆ ಸಮಯದಲ್ಲಿ ಗಲಾಟೆ ಸಾಧ್ಯತೆ ತಡೆಯಲು ಪೊಲೀಸರು ಈ ಕ್ರಮ ಕೈಗೊಂಡರೆ, ತುಮಕೂರಿನ ಯುವ ಕಾಂಗ್ರೆಸ್ ಅಧ್ಯಕ್ಷ ಎಂದು ಹೇಳಿಕೊಂಡ ಶಶಿಹುಲಿಕುಂಟೆ ಫೋನ್ ಮುಖೇನ ಪ್ರತಿಭಟನೆ ಮಾಡಿಸುತ್ತೇನೆಂದು ಬೆದರಿಕೆ ಹಾಕಿದ್ದ. ಇಷ್ಟು ಸಾಲದೆ ಠಾಣೆಗೆ ಧಾವಿಸಿ ವಶಕ್ಕೆ ಪಡೆದ ಹುಡುಗರನ್ನು ಬಿಡದಿದ್ದರೆ ಹಣ, ವಸ್ತು ತೆಗೆದುಕೊಂಡಿದ್ದಾರೆ ಎಂದು ಜನರನ್ನು ಸೇರಿಸಿ ಪ್ರತಿಭಟನೆ ಮಾಡಿಸುತ್ತೇವೆ. 3 ತಿಂಗಳ ನಂತರ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಆಗ ನೋಡಿಕೊಳ್ಳುವೆ ಎಂಬ ಬೆದರಿಕೆ ಹಾಕಿದ ಕೇಸ್ ಕೈಬಿಡಲಾಗಿದೆ.

ಠಾಣೆ ಮೇಲೆ ದಾಳಿ ಮಾಡಿದ್ದವರು ನಿರಾಳ: ಇಸ್ಲಾಂ ಧರ್ಮದ ಬಗ್ಗೆ ವಾಟ್ಸ್​ಆಪ್ ಸ್ಟೇಟಸ್​ನಲ್ಲಿ ಅವಹೇಳನಕಾರಿ ಸಂಗತಿ ಹಂಚಿ ಕೊಂಡಿದ್ದ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಉದ್ರಿಕ್ತಗೊಂಡು 100-150 ಜನರ ಗುಂಪು 2022ರ ಏ.16 ರಂದು ಹಳೇ ಹುಬ್ಬಳ್ಳಿ ಠಾಣೆ ಮೇಲೆ ದಾಳಿ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿತ್ತು. ಆರೋಪಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೇ ಕಲ್ಲು, ಬಡಿಗೆಯಿಂದ ಪೊಲೀಸ್ ಅಧಿಕಾರಿ- ಸಿಬ್ಬಂದಿಗೆ ಹಲ್ಲೆ ಮಾಡಿ ಗಾಯ ಮಾಡಿ, ಠಾಣೆ ಮುಂದೆ ನಿಲ್ಲಿಸಿದ್ದ ಸರ್ಕಾರಿ ಮತ್ತು ಸಾರ್ವಜನಿಕರ ವಾಹನಗಳಿಗೆ ಹಾನಿ ಮಾಡಿದ್ದರು. ಈ ಪ್ರಕರಣ ಇದೀಗ ಕೈಬಿಡಲಾಗಿದೆ.

ಹಿಂಪಡೆದ ದಾವೆಗಳು

  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸಿದ್ದ ರೈತರ ವಿರುದ್ಧ ಕೊಪ್ಪಳ ಟೌನ್ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಕೇಸ್.
  • ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಬಾಗೇಪಲ್ಲಿ (2015) ಹಾಗೂ ಕೋಲಾರದಲ್ಲಿ (2016) ರಾಷ್ಟ್ರೀಯ ಹೆದ್ದಾರಿ ತಡೆದ ಪ್ರಕರಣ. ್ಝ 2017ರಲ್ಲಿ ಗೋ.ಮಧುಸೂಧನ್ ಹೇಳಿಕೆ ವಿರೋಧಿಸಿ ಮೈಸೂರು ಬಂದ್​ಗೆ ಪ್ರಯತ್ನಿಸಿದ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವಿರುದ್ಧ ದಾಖಲಾದ ಪ್ರಕರಣ.
  • ನಕಲಿ ಕನ್ನಡ ಹೋರಾಟಗಾರರು ಎಂದು ಟೀಕಿಸಿದ್ದ ಯತ್ನಾಳ್ ವಿರುದ್ಧ 2020ರಲ್ಲಿ ಬಾಗಲಕೋಟೆಯಲ್ಲಿ ಹೋರಾಟ ನಡೆಸಿದ್ದ ಕರವೇ ಕಾರ್ಯಕರ್ತರ ಪ್ರಕರಣ.
  • 2008ರಲ್ಲಿ ಯಶವಂತಪುರ ರೈಲ್ವೆ ಮೈದಾನದಲ್ಲಿ ರೈಲ್ವೆ ಇಲಾಖೆಯ ಡಿ ಗ್ರೂಪ್ ನೌಕರರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದಾಗ ಕರ್ನಾಟಕದವರಿಗೆ ಪ್ರಾಧಾನ್ಯತೆ ನೀಡಬೇಕೆಂದು ಕರವೇ ನಡೆಸಿದ್ದ ಹೋರಾಟ.
  • 2008ರಲ್ಲಿ ತಮಿಳುನಾಡಿಗೆ ಸೇರಿದ ಕಚೇರಿ ಧ್ವಂಸಕ್ಕೆ ಪ್ರಯತ್ನಿಸಿದ ಕರವೇ ಕಾರ್ಯಕರ್ತರ ವಿರುದ್ಧ ಸಂಪಂಗಿ ರಾಮನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ.
  • 2022ರಲ್ಲಿ ಕರೊನಾ ಸಂದರ್ಭದಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ಸಂವಿಧಾನ ಉಳಿಸಿ ಕಾರ್ಯಕರ್ತರು ಕೊಪ್ಪಳದಲ್ಲಿ ನಡೆಸಿದ ಪ್ರತ್ಯೇಕ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣ.
  • 2021ರಲ್ಲಿ ಹಾವೇರಿ ಜಿಲ್ಲೆ ಎತ್ತಿನಹಳ್ಳಿಯಲ್ಲಿ ಕಾರ ಹುಣ್ಣಿಮೆ ಆಚರಿಸಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸಿದ್ದ ಪ್ರಕರಣ.
  • 2021ರಲ್ಲಿ ಶಿವಮೊಗ್ಗದಲ್ಲಿ ರಾಕೇಶ್ ಟೀಕಾಯತ್ ಭಾಗವಹಿಸಿದ್ದ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಪ್ರಕರಣ.
  • 2020ರಲ್ಲಿ ಗದಗ ಜಿಲ್ಲೆ ಬಳಗನೂರು ಗ್ರಾಮದಲ್ಲಿ ಪೊಲೀಸ್ ಜೀಪ್ ಮೇಲೆ ಕಲ್ಲೆಸೆದು, ಪಿಎಸ್​ಐ, ಹೆಡ್ ಕಾನ್ಸ್​ಸ್ಟೇಬಲ್ ಮೇಲೆ ಹಲ್ಲೆ ಮಾಡಿದ ಪ್ರಕರಣ.
  • 2019ರಲ್ಲಿ ನಂಜನಗೂಡು ಪೊಲೀಸ್ ಠಾಣೆ ವ್ಯಾಪ್ತಿಯ ಸೂರಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಿಸುತ್ತಿದ್ದ ಗುಂಪು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಿಪಡಿಸಿ, ಪೊಲೀಸರ ವಿರುದ್ಧ ಕಲ್ಲುತೂರಾಟ ಮಾಡಿದ್ದ ಪ್ರಕರಣ ದಾಖಲಾಗಿತ್ತು.
  •  2020ರಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದ ಆನೇಕಲ್ ಟೌನ್ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಬಿ.ಶಿವಣ್ಣ ಇತರರ ವಿರುದ್ಧ ದಾಖಲಾಗಿದ್ದ ಪ್ರಕರಣ.
  • 2022ರಲ್ಲಿ ಉತ್ತರ ಕನ್ನಡ ಜಿಲ್ಲೆ ಕಾನುಗೋಡು ಕೆರೆಯಲ್ಲಿ ಮೀನು ಬೇಟೆ ಕಾರ್ಯಕ್ರಮದ ಟಿಕೆಟ್ ವಿಚಾರದಲ್ಲಿ ಅಂಗಡಿ ದ್ವಂಸ, ದರೋಡೆ ಮಾಡಿದ್ದ ಮೂರು ಪ್ರತ್ಯೇಕ ಪ್ರಕರಣ.
  • 2022ರಲ್ಲಿ ಕೋವಿಡ್ ಲಾಕ್​ಡೌನ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದವರ ವಿರುದ್ಧ ದಾಖಲಾದ ಪ್ರಕರಣ.
  • 2021ರಲ್ಲಿ ಬಿಎಂಟಿಸಿ ನೌಕರರು ಕರೊನಾ ನಿಯಮ ಉಲ್ಲಂಘಿಸಿ ಮುಷ್ಕರ ನಡೆಸಿದ್ದರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ.
  • 2021ರಲ್ಲಿ ಸಾರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳದ ನೌಕರನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದವರ ಮೇಲೆ ದಾಖಲಿಸಿದ್ದ ಪ್ರಕರಣ.
  • 2018ರಲ್ಲಿ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ವಿರುದ್ಧ ಪ್ರತಿಭಟನೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪ ಡಿಸಿದ ಪ್ರಕರಣ.
  • 2002ರಲ್ಲಿ ಮುಧೋಳದಲ್ಲಿ ಕಬ್ಬಿನ ಬಿಲ್ ಪಾವತಿಸುವಂತೆ ಪ್ರತಿಭಟನೆ ನಡೆಸಿದ್ದ ಆರು ಪ್ರಕರಣ.
  • 2014ರಲ್ಲಿ ಕುರುಬೂರು ಶಾಂತಕುಮಾರ್ ಮತ್ತಿತರರು ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟು ರಸ್ತೆ ನಡುವೆ ಧರಣಿ ನಡೆಸಿದ್ದರು, ಅವರ ವಿರುದ್ಧ ದಾಖಲಾದ ಪ್ರಕರಣ.
  • 2021ರಲ್ಲಿ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಕರೊನಾ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟಿಸಿದ್ದ ಕುರುಬೂರು ಮತ್ತಿತರರ ಮೇಲೆ ದಾಖಲಾಗಿದ್ದ ಪ್ರಕರಣ.
  • 2016ರಲ್ಲಿ ಮೈಸೂರಿನಲ್ಲಿ ಸಚಿವ ಮಹದೇವಪ್ಪ ಮನೆ ಮುಂದೆ ಧರಣಿ ನಡೆಸಿದ್ದ ಕುರುಬೂರು ಶಾಂತಕುಮಾರ್ ಮತ್ತಿತರರ ಮೇಲೆ ದಾಖಲಾಗಿದ್ದ ಪ್ರಕರಣ.
  • 2018ರಲ್ಲಿ ಆರ್.ಬಿ.ತಿಮ್ಮಾಪುರ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದನ್ನು ವಿರೋಧಿಸಿ ಮುಧೋಳದಲ್ಲಿ ಪ್ರತಿಭಟಿಸಿದ್ದವರ ವಿರುದ್ಧ ದಾಖಲಾಗಿದ್ದ ಪ್ರಕರಣ.
  • 2022ರಲ್ಲಿ ಹಿಜಾಬ್ ಪ್ರಕರಣದಲ್ಲಿ ಸರ್ಕಾರದ ಕ್ರಮ ವಿರೋಧಿಸಿ ಕರೊನಾ ನಿಯಮ ಉಲ್ಲಂಘಿಸಿ ಆಳಂದದಲ್ಲಿ ಪ್ರತಿಭಟನೆ ಮಾಡಿದ್ದ ಎಐಎಂಐಎಂ ಸಂಘಟನೆ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣ.
  • 2022ರಲ್ಲಿ ಕಬ್ಬು ಬೆಲೆ ನಿಗದಿಗೆ ಒತ್ತಾಯಿಸಿ ಮುಧೋಳ ತಾಲೂಕು ಬಂದ್​ಗೆ ಕರೆ ನೀಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದವರ ವಿರುದ್ಧ ಪ್ರಕರಣ.

ಡಿಕೆಶಿ ಅಭಿಮಾನಿಗಳಿಗೆ ಸಿಹಿ

2023ರಲ್ಲಿ ಸದಾಶಿವ ನಗರದ ರಮೇಶ್ ಜಾರಕಿಹೊಳಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ 20-30 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣ ಕೈಬಿಡಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿಯವರು ಡಿ.ಕೆ.ಶಿವಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಪ್ರತಿಭಟನಾಕಾರರು ಖಂಡಿಸಿದ್ದರು.

ಅಂದು ಇಂಡಿಕಾ 1.0, ಇಂದು ನೆಕ್ಸಾನ್​ ಇವಿ… ಟಾಟಾ ಸಾಮ್ರಾಜ್ಯದ ಹಿಂದಿತ್ತು ಸವಾಲಿನ ರತ್ನನ ಪರಪಂಚ

Share This Article

ಹುಡುಗಿಯ ಹೃದಯವನ್ನು ಗೆಲ್ಲುವುದು ಹೇಗೆ..? Chanakya Niti

Chanakya Niti: ಈಗಿನ ಯಾವ ಹುಡುಗಿಯೂ ಹುಡುಗನ ಪ್ರೀತಿಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಚಾಣಕ್ಯನು ಪುರುಷನು…

ಕಂಕುಳಿನ ದುರ್ವಾಸನೆಯಿಂದ ಬೇಕಾ ಮುಕ್ತಿ? ಹಾಗಾದ್ರೆ ಈ ಸಿಂಪಲ್ ಟಿಪ್​ ಅನುಸರಿಸಿ, ಆಮೇಲೆ ನೋಡಿ ಚಮತ್ಕಾರ!

Bad Odour: ವಿಪರೀತ ಬೆವರುವುದು ಇಂದು ಅನೇಕರ ಸಮಸ್ಯೆ. ಪ್ರತಿಯೊಬ್ಬರು ಬೆವರುತ್ತಾರೆ. ಆದರೆ, ಎಲ್ಲರೂ ಬೆವರುವ…

ನೋ ಜಿಮ್​, ನೋ ಡಯಟ್​… ಬರೋಬ್ಬರಿ 20 KG ತೂಕ ಇಳಿಕೆ, ಯುವತಿಯ ಆರೋಗ್ಯದ ಗುಟ್ಟು ರಟ್ಟು! Weight Loss

Weight Loss : ಇತ್ತೀಚೆಗೆ ತೂಕ ಇಳಿಕೆ ತುಂಬಾ ಸುಲಭವಾಗಿದೆ. ಏಕೆಂದರೆ, ತೂಕ ಇಳಿಕೆಗೆ ಹಲವು…