ಮುಂಡಗೋಡ: ಜಾತ್ರೆಯ ಪಾದಗಟ್ಟಿ ಬಳಿ ಹಚ್ಚಿದ್ದ ಧ್ವನಿವರ್ಧಕದ ಸೌಂಡ್ ಕಡಿಮೆ ಮಾಡಿ ಎಂದು ಹೇಳಿದ ವ್ಯಕ್ತಿ ಮೇಲೆ ಹಲ್ಲೆ ನಡೆದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕೊಡಂಬಿ ಗ್ರಾಮದ ನಾಗರಾಜ ವೆಂಕಪ್ಪ ಕಟ್ಟಿಮನಿ ಹಲ್ಲೆಗೊಳಗಾದ ವ್ಯಕ್ತಿ. ಮಾ.4ರಂದು ನಸುಕಿನ 5ಗಂಟೆ ಸಮಯಕ್ಕೆ ಕೊಡಂಬಿ ಜಾತ್ರೆಯ ಪಾದಗಟ್ಟಿ ಬಳಿ ಧ್ವನಿವರ್ಧಕ ಹಚ್ಚಲಾಗಿತ್ತು. ಇದರ ಸೌಂಡ್ ಹೆಚ್ಚಾಗಿದೆ, ತುಂಬಾ ಕಿರಿಕಿರಿ ಆಗುತ್ತಿದೆ. ಸ್ವಲ್ಪ ಕಡಿಮೆ ಮಾಡಿ ಎಂದು ಹೇಳಿದ್ದಕ್ಕೆ ಗ್ರಾಮದ ಮಂಜುನಾಥ ಹನ್ಮಂತಪ್ಪ ಬಳ್ಳಾರಿ, ದತ್ತಣ್ಣ ಹನುಮಂತಪ್ಪ ಕ್ಯಾರಕಟ್ಟಿ, ರಾಜು ಹನ್ಮಂತಪ್ಪ ಬಳ್ಳಾರಿ, ಶಂಕರ ಹನ್ಮಂತಪ್ಪ ಬಳ್ಳಾರಿ, ಮಂಜುನಾಥ ಮಲ್ಲೇಶಪ್ಪ ಕೆಂದಲಗೇರಿ, ಪರಶುರಾಮ ತಾರಕೇಶಪ್ಪ ಬಾತಿ, ಸುರೇಶ ತಾರಕೇಶಪ್ಪ ಬಾತಿ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದರು. ಜಗಳ ಬಿಡಿಸಲು ಬಂದ ನನ್ನ ಮಗ ರಾಜಕುಮಾರನ ಮೇಲೂ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿ ಜೀವ ಬೇದರಿಕೆ ಹಾಕಿದ್ದಾರೆ ಎಂದು ನಾಗರಾಜ ಕಟ್ಟಿಮನಿ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.