ಉದ್ಯಮಿಗೆ ಹಲ್ಲೆ, ದರೋಡೆ ಆರೋಪ ಸಾಬೀತು

<ಐವರಿಗೆ ಏಳು ವರ್ಷ ಜೈಲು>

ಮಂಗಳೂರು:ನಗರದ ಹಂಪನಕಟ್ಟೆಯ ಬಟ್ಟೆ ಮಳಿಗೆ ಮಾಲೀಕ ಕನ್ನಯಲಾಲ್ ಗುಪ್ತ ಎಂಬುವರ ಮೇಲೆ ನಾಲ್ಕು ವರ್ಷಗಳ ಹಿಂದೆ ನಡೆದ ಹಲ್ಲೆ ಮತ್ತು ದರೋಡೆ ಪ್ರಕರಣದ ಐವರ ಮೇಲಿನ ಆರೋಪ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲ್ಲಿ ಸಾಬೀತಾಗಿದ್ದು, ಅಪರಾಧಿಗಳಿಗೆ ತಲಾ 7 ವರ್ಷ ಜೈಲು ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ರಂಗಿಪೇಟೆಯ ರ್ಇಾನ್(39), ಮಹಮದ್ ಮುಶ್ತಾಕ್(30), ಬಿ.ಸಿ ರೋಡ್ ಶಾಂತಿಅಂಗಡಿಯ ಸಮೀರ್ ಕೆ.ಎಂ(27), ಬಂಟ್ವಾಳ ತಾಲೂಕು ಪುದು ಗ್ರಾಮದ ಮಹಮದ್ ರ್ಇಾನ್(35) ಮತ್ತು ಮೇರೆಮಜಲಿನ ದಿಲನ್ ಅವಿನಾಶ್ ಕಾರ್ಡೋಜಾ(29) ಶಿಕ್ಷೆಗೊಳಗಾದವರು.

ಪ್ರಕರಣ ಹಿನ್ನೆಲೆ: 2015 ಮಾರ್ಚ್ 13 ರಂದು ಸಾಯಂಕಾಲ ಕಾರಿನಲ್ಲಿ ಬಂದ ಐವರು ಬಟ್ಟೆ ಮಳಿಗೆ ಪ್ರವೇಶಿಸಿ ಅಲ್ಲಿದ್ದ ಕನ್ನಯಲಾಲ್ ಗುಪ್ತ ಅವರ ಮೇಲೆ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿ, ಲ್ಯಾಪ್‌ಟಾಪ್ ಎಳೆದು ುಟ್‌ಪಾತ್‌ಗೆ ಎಸೆದು ಹಾನಿಗೊಳಿಸಿದ್ದಲ್ಲದೆ, ಅವರ ಕಿಸೆಯಲ್ಲಿದ್ದ 2,700 ರೂ. ಮತ್ತು ಡ್ರಾಯರ್‌ನಲ್ಲಿದ್ದ 25,800 ರೂ.ಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ವ್ಯವಹಾರ ಸಂಬಂಧಿತ ದ್ವೇಷ ಇದಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಇನ್ಸ್‌ಪೆಕ್ಟರ್ ಶಾಂತಾರಾಮ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಮಲ್ಲನ ಗೌಡ ಅವರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

ದಂಡದ ಮೊತ್ತದಲ್ಲಿ 1 ಲಕ್ಷ ರೂ.ಗಳನ್ನು ಸಂತ್ರಸ್ತ, ದೂರುದಾರ ಕನ್ನಯಲಾಲ್ ಅವರಿಗೆ ನಷ್ಟ ಪರಿಹಾರವಾಗಿ ಪಾವತಿಸಬೇಕು ಉಳಿದ ಹಣವನ್ನು ಸರ್ಕಾರಕ್ಕೆ ನೀಡಬೇಕೆಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.