ತುಮಕೂರು: ಭಜರಂಗದಳದ ಕಾರ್ಯಕರ್ತರ ಮೇಲೆ ಯುವಕರ ಗುಂಪೊಂದು ದಾಳಿ ನಡೆಸಿ ಹಲ್ಲೆ ನಡೆಸಿದ್ದು, ಕೋಮುಸಂಘರ್ಷದ ಶಂಕೆ ಉಂಟಾಗಿದೆ. ತುಮಕೂರಿನ ಗುಬ್ಬಿ ಗೇಟ್ ಬಳಿ ಈ ಹಲ್ಲೆ ನಡೆದಿದೆ.
ಭಜರಂಗದಳದ ತುಮಕೂರು ಜಿಲ್ಲಾ ಸಂಚಾಲಕ ಮಂಜುಭಾರ್ಗವ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಬ್ಬ ಕಾರ್ಯಕರ್ತ ಕಿರಣ್ ಎಂಬವರ ಮೇಲೂ ಹಲ್ಲೆ ನಡೆದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಮನೆ ಬೀಗ-ಬಾಗಿಲು ಮುರಿಯದೆ, ಕನ್ನ ಹಾಕದೆ ಕಳವು ಮಾಡುತ್ತಿದ್ದ ಕಳ್ಳನ ಬಂಧನ; ಸಂಬಂಧಿಕರ ಮನೆಯನ್ನೂ ಬಿಡಲಿಲ್ಲ..
ಇಬ್ಬರೂ ಕಾರಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ರಾಡ್ನಿಂದ ಹಲ್ಲೆ ಮಾಡಿದೆ. ಹಲ್ಲೆ ಮಾಡಿದವರು ಅನ್ಯಕೋಮಿಗೆ ಸೇರಿದವರು ಎನ್ನಲಾಗಿದ್ದು, ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಲ್ಲೆ ನಡೆದಿದೆ.
ನಿರ್ಮಾಣದ ಹಂತದ ಕಟ್ಟಡದ ಸಂಪ್ನೊಳಗೆ ಬಿದ್ದು ಮಗು ಸಾವು; ಇನ್ನೊಂದು ಮಗುವಿಗಾಗಿ ಮುಂದುವರಿದ ಹುಡುಕಾಟ
ಕರ್ತವ್ಯದಲ್ಲಿರುವಾಗ, ಸಮವಸ್ತ್ರ ಧರಿಸಿಕೊಂಡೇ ಪೊಲೀಸರ ಡ್ರಿಂಕ್ಸ್ ಪಾರ್ಟಿ; ಬಾರ್ವೊಂದರ ಕೊಠಡಿಯಲ್ಲಿ ಕುಡಿಯುತ್ತಿದ್ದ ವಿಡಿಯೋ ವೈರಲ್