ನವದೆಹಲಿ: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ಸಿಂಗ್ ರಾಜೀನಾಮೆ ಸಲ್ಲಿಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಲೆಫ್ಟಿನೆಂಟ್ ಗವರ್ನರ್ ವಿಕೆ ಸೆಕ್ಸೇನಾ ದೆಹಲಿ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. 70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 05ರಂದು ಮತದಾನ ನಡೆದಿತ್ತು. ಫೆಬ್ರವರಿ 08ರಂದು ಫಲಿತಾಂಶ ಪ್ರಕಟವಾಗಿತ್ತು.
20154 ಹಾಗೂ 2020ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಬಾರಿಸುವ ಕನಸು ಕಂಡಿದ್ದ ಎಎಪಿಗೆ ದೆಹಲಿ ಜನರು ತಣ್ಣೀರು ಎರೆಚಿದ್ದಾರೆ. 48 ಸ್ಥಾನಗಳ್ಲಿ ಜಯಿಸಿರುವ ಬಿಜೆಪಿ ಸರ್ಕಾರ ರಚಿಸಲಿದ್ದು, ಲೆಫ್ಟಿನೆಂಟ್ ಗವರ್ನರ್ ಬಳಿ ಇಂದು (ಫೆಬ್ರವರಿ 09) ಹಕ್ಕು ಮಂಡಿಸುವ ಸಾಧ್ಯತೆಯಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬಿಜೆಪಿಯ ಪರ್ವೇಶ್ ವರ್ಮಾ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಮುಗಿಸಿ, ಮುಂದಿನ ವಾರ ವಾಪಸ್ ಆದ ಬಳಿಕ ಬಿಜೆಪಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಫೆಬ್ರವರಿ 10ರಂದು ಫ್ರಾನ್ಸ್‌ಗೆ ಭೇಟಿ ನೀಡಲಿರುವ ಮೋದಿ, ಫೆಬ್ರವರಿ 12ರಿಂದ ಎರಡು ದಿನ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.
Delhi LG Vinai Kumar Saxena dissolves the Seventh Legislative Assembly of the National Capital Territory of Delhi with effect from 08th February, 2025
BJP emerged victorious in #DelhiAssemblyElection2025 yesterday after winning 48 out of 70 seats pic.twitter.com/d7WfcVDCXE
— ANI (@ANI) February 9, 2025
ಪಂಜಾಬ್ ಸಿಎಂ ಆಗಿ ಕೇಜ್ರಿವಾಲ್ ಪದಗ್ರಹಣ? ನಿಜವಾಗುತ್ತ Congress ನಾಯಕರು ನುಡಿದ ಭವಿಷ್ಯ
ಹಾಡಹಗಲೇ ವಿದ್ಯಾರ್ಥಿನಿಯನ್ನು Kidnap ಮಾಡಿದ ಯುವಕರು; ಆರೋಪಿಗಳ ಫೋಟೋ ರಿಲೀಸ್, ವಿಡಿಯೋ ವೈರಲ್