More

  ಅಟಲ್ ಟಿಂಕರಿಂಗ್ ಲ್ಯಾಬ್ ಬಲವರ್ಧನೆ ಸಭೆ

  ಹುಬ್ಬಳ್ಳಿ: ಅಟಲ್ ಟಿಂಕರಿಂಗ್ ಲ್ಯಾಬ್ ಬಲವರ್ಧನೆ ಕುರಿತು ಎರಡನೇ ಹಂತದ ಮಹತ್ವದ ಸಭೆಯು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಅವರ ಅಧ್ಯಕ್ಷತೆಯಲ್ಲಿ ಇಲ್ಲಿಯ ಗೋಕುಲದ ಎಸ್.ಆರ್. ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರುಗಿತು.

  ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ಹೊಂದಿರುವ ಶಾಲೆಗಳಲ್ಲಿ ಲಭ್ಯವಿರುವ ಉಪಕರಣಗಳ ಕುರಿತ ಮಾಹಿತಿಯನ್ನು ಶಿಕ್ಷಕರು ಹಾಗೂ ವಿದ್ಯಾಥಿರ್ಗಳಿಗೆ ತಿಳಿಸಿಕೊಡುವ ಉದ್ದೇಶದಿಂದ ತಾಂತ್ರಿಕ ಮಹಾವಿದ್ಯಾಲಯಗಳ ಸಹಭಾಗಿತ್ವ ಪಡೆಯಲಾಗಿದೆ.

  ದತ್ತು ನೀಡಿದ ಶಾಲೆಗಳು ಹಾಗೂ ಅಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಬಿಇಒ ಅವರಿಗೆ ನೀಡಲಾಗುವುದು. ಅವರು ಶಾಲೆಗಳನ್ನು ಸಂಪಕಿರ್ಸಿ ತಿಳಿಸಿಕೊಡುವರು ಎಂದು ಜಯಶ್ರೀ ಅವರು ತಿಳಿಸಿದರು.

  ಡಯಟ್ ನ ದೀಪಕ್ ಕುಲಕರ್ಣಿ ಪಿಪಿಟಿ ಮೂಲಕ ಜಿಲ್ಲೆಯ ಅಟಲ್ ಟಿಂಕರಿಂಗ್ ಲ್ಯಾಬ್ಗಳ ಪ್ರಗತಿ ಕುರಿತು ವಿವರಿಸಿದರು. ಜಿಲ್ಲೆಯಲ್ಲಿ ಒಟ್ಟು 7 ಸರ್ಕಾರಿ ಶಾಲೆಗಳು, 7 ಅನುದಾನಿತ ಶಾಲೆಗಳು, 6 ಅನುದಾನ ರಹಿತ ಶಾಲೆಗಳಲ್ಲಿ ಟಿಂಕರಿಂಗ್ ಲ್ಯಾಬ್ ಕಾರ್ಯ ನಿರ್ವಹಿಸುತ್ತಿದೆ ಎಂದರು.

  ಆಯುಕ್ತರ ಕಾರ್ಯಾಲಯದ ಉಪನಿರ್ದೇಶಕ ಎಸ್.ಬಿ. ಬೆಂಗೇರಿ, ಎಐಎ್ ಮೊಹಮದ್ ಜಿಯಾ ಉದ್ದೀನ್ ಮಾತನಾಡಿದರು.

  ಡಯಟ್ ಉಪ ಪ್ರಾಚಾರ್ಯ ಜೆ.ಜಿ. ಸೈಯದ್, ಶಾಲೆಯ ಮುಖ್ಯೋಪಾಧ್ಯಾಯರೊಂದಿಗೆ ಚಚಿರ್ಸಿ ಅನುಕೂಲಕರ ವೇಳೆಯಲ್ಲಿ ಮಕ್ಕಳಿಗೆ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.

  ಎನ್ಟಿಟಿಎಫ್ ಉಪಪ್ರಾಚಾರ್ಯ ಲಲಿತಾ ನಾಯ್ಡು ಇವರು ಕೋಟೂರಿನ ಸರ್ಕಾರಿ ಪ್ರೌಢಶಾಲೆ, ಅದರಗುಂಚಿ ಸರ್ಕಾರಿ ಪ್ರೌಢಶಾಲೆಯನ್ನು ವರೂರಿನ ಎಜಿಎಂ ಎಂಜಿನಿಯರಿಂಗ್ ಕಾಲೇಜು,, ಗೋಕುಲ ಸರ್ಕಾರಿ ಪ್ರೌಢಶಾಲೆಯನ್ನು ಕೆಎಲ್ಇ ಹೀಗೆ ವಿವಿಧ ಸಂಸ್ಥೆಯವರು ದತ್ತು ಪಡೆಯಲು ಮುಂದೆ ಬಂದರು.

  ಧಾರವಾಡ ಐಐಐಟಿ ಡೀನ್ ಡಾ. ರಾಜೇಂದ್ರ ಹೆಗಡೆ, ಟಾಟಾ ಮೋಟರ್ಸ್ನ ಜಿ.ವಿ. ಹಿರೇಮಠ, ಪ್ರಸನ್ನ ಪಟ್ಟಣಶೆಟ್ಟಿ, ಡಾ. ಸಂತೋಷ ಯು, ಡಾ. ಎಸ್.ಎಸ್. ನವಲಗುಂದ, ಪ್ರೊ. ಗೋವಿಂದ ನೆಗಳೂರ, ಡಾ. ಬಬಿತಾ, ಗಿರೀಶ್ ಸಂಶಿ, ಕೌಶಿಕ್, ಎಸ್.ಎಸ್. ಭಾವಿಕಟ್ಟಿ, ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts