ನವದೆಹಲಿ: ನಿನ್ನೆಯಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಗುರುವಾರ ದೆಹಲಿಯ ನಾರ್ತ್ ಬ್ಲಾಕ್ನಲ್ಲಿರುವ ಗೃಹ ಸಚಿವಾಲಯದ ಕಚೇರಿಯಲ್ಲಿ ಅಮಿತ್ ಷಾರನ್ನು ಮಮತಾ ಬ್ಯಾನರ್ಜಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಅಸ್ಸಾಂನಲ್ಲಿ ಎನ್ಆರ್ಸಿಯಿಂದ ಹೊರಗುಳಿದವರಲ್ಲಿ ಭಾರತೀಯರೂ ಸೇರಿದ್ದಾರೆ. ಹಾಗಾಗಿ ಅವರ ಪ್ರಕರಣಗಳನ್ನು ಪರಿಶೀಲಿಸಿ ಅವರನ್ನು ಎನ್ಆರ್ಸಿಯೊಳಗೆ ಸೇರಿಸಬೇಕು. ಬೆಂಗಾಳಿ, ಹಿಂದಿ ಮಾತನಾಡುವವರು, ಹಲವು ಗೂರ್ಖಾ ಸಮುದಾಯದ ಮತ್ತು ಅಸ್ಸಾಂನ ಮೂಲನಿವಾಸಿಗಳನ್ನು ಎನ್ಆರ್ಸಿಯಿಂದ ಹೊರಗಿಡಲಾಗಿದೆ. ಈ ಪ್ರಕರಣಗಳನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ಅಮಿತ್ ಷಾ ಅವರೊಂದಿಗೆ ಸುಮಾರು 30 ನಿಮಿಷ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ ನಾನು ಪಶ್ಚಿಮ ಬಂಗಾಳದಲ್ಲಿ ಎನ್ಆರ್ಸಿ ಕುರಿತು ಮಾತನಾಡಲು ಬಂದಿರಲಿಲ್ಲ. ನಾನು ಅಸ್ಸಾಂನ ಎನ್ಆರ್ಸಿ ವರದಿಯ ಕುರಿತು ಚರ್ಚೆ ನಡೆಸಲು ಬಂದಿದ್ದೆ ಎಂದು ತಿಳಿಸಿದ್ದಾರೆ.
ಎನ್ಆರ್ಸಿ ಪಟ್ಟಿಯಿಂದ 19.06 ಲಕ್ಷ ಜನ ಹೊರಕ್ಕೆ: ಮುಂದೇನಾಗುತ್ತೆ ಗೊತ್ತಾ ಇವರೆಲ್ಲರ ಪರಿಸ್ಥಿತಿ?
ವಲಸೆ ಹೊಸ ವರಸೆ: ಅಸ್ಸಾಂ ಎನ್ಆರ್ಸಿ ಅಂತಿಮ ಪಟ್ಟಿ ಪ್ರಕಟ, 19 ಲಕ್ಷ ಜನ ಔಟ್, ಎನ್ಡಿಎನಲ್ಲೇ ಅಪಸ್ವರ