ಭೀಕರ ಅಪಘಾತದಲ್ಲಿ ಒಂಭತ್ತು ಮಂದಿ ಕಾಲೇಜು ವಿದ್ಯಾರ್ಥಿಗಳ ದುರ್ಮರಣ

ಪುಣೆ: ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಬರುವ ಕದಂವಕ್​ ವಸ್ತಿ ಗ್ರಾಮದ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂಭತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶುಕ್ರವಾರ ತಡರಾತ್ತಿ ಕಾರು ಮತ್ತು ಟ್ರಕ್​ ಮುಖಾಮುಖಿ ಡಿಕ್ಕಿಯಾಗಿವೆ. ಅಕ್ಷಯ್​ ಭರತ್​ ವೈಕರ್​, ವಿಶಾಲ್​ ಸುಭಾಷ್​ ಯಾದವ್​, ನಿಖಿಲ್​ ಚಂದ್ರಕಾಂತ್​, ನೂರ್​ ಮಹಮ್ಮದ್​ ಅಬ್ಬಾಸ್​ ದಯಾ, ಪರ್ವೇಜ್​ ಅತ್ತರ್​, ಶುಭಂ ರಾಮ್​ದಾಸ್​ ಭಿಸೆ, ಅಕ್ಷಯ್​ ಚಂದ್ರಕಾಂತ್​, ದತ್ತ ಗಣೇಶ್​ ಯಾದವ್​, ಜುಬೇರ್ ಅಜೀಜ್ ಮುಲಾನಿ ಮೃತರು. ಪುಣೆಯ ಯಾವತ್​ ಗ್ರಾಮದವರಾದ ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳು.

ಇವರೆಲ್ಲ ರಾಯಗಢಕ್ಕೆ ಪ್ರವಾಸಕ್ಕೆ ತೆರಳಿ ಪುಣೆಗೆ ಮರಳುವಾಗ ಅಪಘಾತ ಸಂಭವಿಸಿದೆ. ಕಾರು ಡಿವೈಡರ್​ ಬಳಿ ಜಂಪ್​ ಆಗಿದೆ. ಅದೇ ಸಮಯಕ್ಕೆ ಪುಣೆ ಕಡೆಯಿಂದ ಬರುತ್ತಿದ್ದ ಬರುತ್ತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಪುಣೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *