More

  ಬಸ್‌ ನಿಲ್ದಾಣದಲ್ಲಿ ಆರ್‌ಒ ಪ್ಲಾಂಟ್ ನಿರ್ಮಾಣ

  ಹೂವಿನಹಡಗಲಿ: ಇಲ್ಲಿನ ಸಾರಿಗೆ ಘಟಕಕ್ಕೆ ಹೆಚ್ಚುವರಿಯಾಗಿ ಇನ್ನೂ 8 ಬಸ್‌ಗಳು ಬರಲಿವೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

  ಪಟ್ಟಣದ ಸಾರಿಗೆ ಘಟಕದಲ್ಲಿ ಹೂವಿನಹಡಗಲಿಯಿಂದ ಬೆಂಗಳೂರಿಗೆ ಪ್ರತಿದಿನ ಸಂಚರಿಸುವ ಸ್ಲೀಪರ್ ಕೋಚ್ ನಾನ್ ಎಸಿ ಬಸ್‌ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

  ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ್ದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಬಸ್‌ಗಳ ಕೊರತೆಯಾಗಿದೆ. ಹೀಗಾಗಿ ಡಿಪೋಗೆ ಹೆಚ್ಚುವರಿ 8 ಬಸ್‌ಗಳನ್ನು ಕೇಳಿದ್ದು, ಈಗಾಗಲೇ ಸ್ಲೀಪರ್ ಕೋಚ್ ಬಂದಿದೆ. ಡಿಪೋ ಮತ್ತು ಬಸ್ ನಿಲ್ದಾಣದಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಿಸಲು 500 ಲೀ. ಸಾಮರ್ಥ್ಯದ ತಲಾ ಒಂದು ಆರ್‌ಒ ಪ್ಲಾಂಟ್ ಸ್ಥಾಪಿಸಲಾಗುವುದು ಎಂದರು.

  ಘಟಕ ವ್ಯವಸ್ಥಾಪಕ ವೆಂಕಟಾಚಲಪತಿ ಮಾತನಾಡಿ, ಸ್ಲೀಪರ್ ಕೋಚ್ ಬಸ್ ಹೂವಿನಹಡಗಲಿಯಿಂದ ರಾತ್ರಿ 9:30ಕ್ಕೆ ಹರಪನಹಳ್ಳಿ, ದಾವಣಗೆರೆ ಮಾರ್ಗವಾಗಿ ಹೊರಟು ಬೆಳಗಿನ ಜಾವ 5ಗಂಟೆಗೆ ಬೆಂಗಳೂರು ತಲುಪಲಿದೆ. ಅಂದು ರಾತ್ರಿ 10: 45ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 6ಗಂಟೆಗೆ ಹೂವಿನಹಡಗಲಿಗೆ ಬರಲಿದೆ ಎಂದು ತಿಳಿಸಿದರು. ಸಹಾಯಕ ಸಂಚಾರ ಅಧೀಕ್ಷಕ ಅಶೋಕ, ಚಾಲಕ ಪ್ರಭಾಕರ ಕೆ, ಸಾರಿಗೆ ಘಟಕದ ಸಿಬ್ಬಂದಿ ಮಾರುತಿ, ಹನುಮಂತಪ್ಪ, ಸಂತೋಷ, ಜಗದೀಶ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts