ಬೆಂಗಳೂರು: ಪ್ರಭಾತ್ ಆರ್ಟ್ಸ್ ಇಂಟರ್ನ್ಯಾಷನಲ್, ಶನಿವಾರ (ಜ.18) ಸಂಜೆ 6ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಾಭಾರತ ಆಧಾರಿತ ‘ಆ ಹದಿನೆಂಟು ದಿನಗಳು’ ನೃತ್ಯ ನಾಟಕ ಪ್ರದರ್ಶನವನ್ನು ಏರ್ಪಡಿಸಿದೆ.
ಸಂಸ್ಥೆಯ ಯುವ ಕಲಾನೇತಾರರಾದ ಉದಯ್ಶಂಕರ್ ಪ್ರಶಸ್ತಿ ಪುರಸ್ಕೃತ ಭರತ್ ಆರ್. ಪ್ರಭಾತ್ ಹಾಗೂ ಶರತ್ ಆರ್.ಪ್ರಭಾತ್ ಅವರೊಂದಿಗೆ 60 ಮಂದಿ ಪರಿಣತ ನೃತ್ಯಪಟುಗಳು ಈ ನಾಟಕ ನಡೆಸಿ ಕೊಡಲಿದ್ದಾರೆ. ಕಾರ್ಯಕ್ರಮಕ್ಕೆ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುದೇಂದ್ರ ತೀರ್ಥರು, ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥರು, ಮೇಲುಕೋಟೆ ಯತಿರಾಜ ಮಠದ ಜೀಯರ್ಸ್ವಾಮೀಜಿಗಳ ಸಾನ್ನಿಧ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ಸಂಸದ ತೇಜಸ್ವಿಸೂರ್ಯ, ಕಂದಾಯ ಸಚಿವ ಆರ್.ಅಶೋಕ್, ನಟ ವಿಜಯ್ ರಾಘವೇಂದ್ರ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಜೆ. ಪ್ರಭಾತ್ ತಿಳಿಸಿದ್ದಾರೆ.
ಬುಕ್ ಮೈ ಶೋ ನಲ್ಲಿ ಟೆಕೆಟ್ ಲಭ್ಯ: ‘ಆ ಹದಿನೆಂಟು ದಿನಗಳು’ ನಾಟಕದ ಟೆಕೆಟ್ಗಳು ಬುಕ್ ಮೈ ಶೋನಲ್ಲಿ ಲಭ್ಯ ಇವೆ. ನೃತ್ಯ ನಾಟಕ ಪ್ರದರ್ಶನ ವೀಕ್ಷಿಸ ಬಯಸುವವರು ತಮ್ಮ ಟಿಕೆಟ್ಗಳನ್ನು ಕಾಯ್ದಿರಿಸಿಕೊಳ್ಳಲು ಬುಕ್ ಮೈ ಶೋನಲ್ಲಿ ‘18 ಡೇಸ್ ಪ್ರಭಾತ್ ’ಎಂದು ನಮೂದಿಸಿದರೆ ವಿತರಣೆ ಸಿಗುತ್ತದೆ. ಮಾಹಿತಿಗಾಗಿ 080-26763636 , 9448045153 ಸಂಪರ್ಕಿಸಬಹುದು.
ವಿಶಿಷ್ಟ ಅನುಭವ
‘ಆ ಹದಿನೆಂಟು ದಿನಗಳು’ ನಿತ್ಯವಿನೂತನ ನವನವೀನ ಸೃಜನಶೀಲ ಶೈಲಿಯ ಕಲೆ ಹಾಗೂ ತಂತ್ರಜ್ಞಾನದ ವೈಭವೋಪೇತ ರಸಪಾಕ ಪ್ರದರ್ಶನ. ಅಧುನಿಕ ಪ್ರಜ್ಞೆಯನ್ನು ಎತ್ತಿಹಿಡಿಯುವ ಹೊಸ ನೃತ್ಯ ನಾಟಕ. ಮಹಾಕಾವ್ಯ ಮಹಾಭಾರತದಿಂದ ರಸವಶರಾಗಿ ನಿರ್ವಿುತಗೊಂಡ ಈ ಕಲಾಕೃತಿ, ಸೃಜನಾತ್ಮಕ ಸಂಗೀತ ಹಾಗೂ ನೃತ್ಯ ಸಂಯೋಜನೆಯಿಂದ ಹಾಗೂ ಆಧುನಿಕ ರಂಗ ಸಜ್ಜಿಕೆ , 3ಡಿ ಆನಿಮೇಷನ್ಸ್, ಏರಿಯಲ್ ತಂತ್ರಗಳು, ರಂಗಾಲಂಕಾರ, ಹಾಗೂ ಆಕರ್ಷಣೀಯ ವಸ್ತ್ರವಿನ್ಯಾಸದಿಂದಾಗಿ ವೀಕ್ಷಕರಿಗೆ ಒಂದು ವಿಶಿಷ್ಟ ಅನುಭವನ್ನು ನೀಡುತ್ತದೆ.