ಶಿರಹಟ್ಟಿ: ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಿವಿಧ ಇಲಾಖೆಗಳ ನಿವೇಶನ ಬೇಡಿಕೆಗೆ ಸದಸ್ಯರು ಒಮ್ಮತದಿಂದ ಅನುಮೋದನೆ ನೀಡಿದ್ದಾರೆ. ಪಟ್ಟಣ ಪಂಚಾಯಿತಿ ಹಳೇ ಕಟ್ಟಡದಲ್ಲಿ ಇತ್ತೀಚೆಗೆ ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ನೂತನ ಕಟ್ಟಡ ಬೇಗ ನಿರ್ಮಾಣ ಮಾಡಲು ಸದಸ್ಯರು ಒಪ್ಪಿಗೆ ಸೂಚಿಸಿದರು.
ಜಾಗ ನೀಡಲು ತೀರ್ಮಾನ: ಶಿಶು ಅಭಿವೃದ್ಧಿ ಇಲಾಖೆಗೆ ಬಾಲ ಭವನ ನಿರ್ಮಿಸಲು ನಿವೇಶನ, ಅಂಬಿಗರ ಚೌಡಯ್ಯ ಸಮುದಾಯ ಭವನಕ್ಕೆ ನಿವೇಶನ, ಮತ್ತು ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ನಿವೇಶನ ನೀಡಲು ಸದಸ್ಯರು ಅನುಮೋದನೆ ನೀಡಿದರು.
ಕೃಷಿ ಇಲಾಖೆ ಈಗಾಗಲೇ ಸಾಕಷ್ಟು ಸ್ಥಳವಿದೆ. ಬೃಹತ್ ಮಟ್ಟದಲ್ಲಿ ನೂತನ ಕಟ್ಟಡ ಹಾಗೂ ಗೋದಾಮು ಕಟ್ಟಿಕೊಳ್ಳುವಂತೆ ಸದಸ್ಯರು ನಿರ್ಧಾರ ಕೈಗೊಂಡರು. ಉಪ ಖಜಾನೆ ಇಲಾಖೆ ಈಗಿರುವ ಸ್ಥಳದಲ್ಲಿಯೇ ಮುಂದುವರಿಸುವಂತೆ ಸದ್ಯಕ್ಕೆ ನೂತನ ನಿವೇಶನ ಮಾಡಲು ಅವಶ್ಯಕತೆ ಇಲ್ಲ ಎಂದು ತೀರ್ಮಾನ ಕೈಗೊಂಡರು.
ನೂತನ ಸ್ಥಾಯಿ ಸಮಿತಿ ರಚನೆ: ಇತ್ತೀಚೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಆಗಿರುವುದರಿಂದ ಸ್ಥಾಯಿ ಸಮಿತಿ ರಚನೆಗೆ ನಿರ್ಧಾರ ಕೈಗೊಳ್ಳಲಾಯಿತು. ಅಧ್ಯಕ್ಷರು, ಉಪಾಧ್ಯಕ್ಷರನ್ನು ಹೊರತುಪಡಿಸಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಉಳಿದ 9 ಸದಸ್ಯರಲ್ಲಿ ಎಂಟು ಸದಸ್ಯರನ್ನು ಹಾಗೂ ಬಿಜೆಪಿ ಪಕ್ಷದ ಏಳು ಸದಸ್ಯರಲ್ಲಿ ಮೂವರ ಸದಸ್ಯರನ್ನು ಒಟ್ಟು 11 ಸ್ಥಾಯಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಪತ್ರಕರ್ತರ ಭವನಕ್ಕೆ ನಿವೇಶನ: ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಕಲ್ಪಿಸಿಕೊಡುವಂತೆ ಸದಸ್ಯರಾದ ಹೊನ್ನಪ್ಪ ಶಿರಹಟ್ಟಿ ಮತ್ತು ಸಂದೀಪ ಕಪ್ಪತ್ತನವರ್ ಹೇಳಿದರು. ಸಿಸಿಎನ್ ಬಡಾವಣೆಯಲ್ಲಿನ ಸಿಸಿ ಸೈಟ್‌ನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸದಸ್ಯರು ಒಪ್ಪಿದರು. ಪಪಂ ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಮುಖ್ಯಾಧಿಕಾರಿ ಸಿದ್ದರಾಮ ಕಟ್ಟಿಮನಿ, ಪರಮೇಶ ಪರಬ, ಮಂಜುನಾಥ ಗಂಟೆ, ಇಸಾಕ್ ಅದರಳ್ಳಿ, ಅರ್ಶದ ಡಾಲಾಯತ್, ಗಂಗವ್ವ ಆಲೂರ, ಶಿವರಾಜ ಕಪ್ಪತ್ತನವರ, ಯಶೋಧಾ ಡೊಂಕಬಳ್ಳಿ, ಅನಿತಾ ಬಾರಬರ್, ಮುಸ್ತಾಕ್ ಚೋರಗುಸ್ತಿ, ನಾಗೇಶ ಕುಲಕರ್ಣಿ, ಪಪ ಸಿಬ್ಬಂದಿ ಇದ್ದರು.
ಪಪಂ ಹೊಸ ಕಚೇರಿ ನಿರ್ಮಾಣಕ್ಕೆ ಅಸ್ತು
A. P. J. Abdul Kalam ಅವರ ಈ ಟ್ರಿಕ್ಸ್ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್ ಮಾಡ್ದೆ ಅನುಸರಿಸಿ
ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…
ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies
ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…
ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing
Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…