More

    ಜಕಣಾಚಾರಿಯರ ವಾಸ್ತುಶಿಲ್ಪ ಪ್ರಪಂಚಕ್ಕೆ ಪ್ರಸಿದ್ಧಿ

    ದೇವದುರ್ಗ: ಅರಮಶಿಲ್ಪಿ ಜಕಣಾಚಾರಿಯರು ದೇಶದ ಶ್ರೇಷ್ಠ ವಾಸ್ತುಶಿಲ್ಪ ಕಲೆಗಾರರಾಗಿದ್ದರು ಎಂದು ಕಲಾವಿದ ಗಂಗಾಧರ ವಿಶ್ವಕರ್ಮ ಹೇಳಿದರು.

    ಇದನ್ನೂ ಓದಿ: ಜಗತ್ತಿನ ಶ್ರೇಷ್ಠ ವಾಸ್ತುಶಿಲ್ಪಿ ಜಕಣಾಚಾರಿ

    ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿಯಲ್ಲಿ ಸೋಮವಾರ ಮಾತನಾಡಿದರು.

    ಬೇಲೂರು, ಹಳೇಬೀಡು, ಹೊಯ್ಸಳರ ಕಾಲದ ವಾಸ್ತುಶಿಲ್ಪಿಗಳು ಪ್ರಪಂಚಕ್ಕೆ ಪ್ರಸಿದ್ಧಿಯಾಗಿದೆ. ವಾಸ್ತುಶಿಲ್ಪ ಕೆತ್ತನೆ ಎಂದರೆ ಜಕಣಾಚಾರಿ ನೆನಪಾಗುತ್ತಾರೆ. ವಿಶ್ವಕರ್ಮ ಸಮಾಜ ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ವಿವಿಧ ಕ್ಷೇತ್ರದಲ್ಲಿ ಮುನ್ನಡೆಯುವುದು ಅಗತ್ಯ. ಕುಶಲಕರ್ಮಿಗಳಿಗೆ ಸರ್ಕಾರ ವಿಶೇಷ ಸೌಲಭ್ಯ ರೂಪಿಸಬೇಕು ಎಂದರು.

    ಕಲಾವಿದ ಗಂಗಾಧರ ವಿಶ್ವಕರ್ಮ ಅಭಿಮತ


    ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಶಿರಸ್ತೇದಾರ್ ಗೋವಿಂದ ನಾಯಕ, ಭೀಮರಾಯ ನಾಯಕ, ಪ್ರವೀಣ್ ಕುಮಾರ, ಅನಿಲ್ ಕುಮಾರ, ವಿಶ್ವಕರ್ಮ ಸಮಾಜದ ಅಧ್ಯಕ್ಷ ರಮೇಶ್ ವಿಶ್ವಕರ್ಮ, ಮಲ್ಲಪ್ಪ ವಿಶ್ವಕರ್ಮ, ಚಿತ್ರಶೇಕರ್, ದೇವಪ್ಪ, ಶಿವಣ್ಣ, ಮಲ್ಲಣ್ಣ, ಮೌನೇಶ್, ಬಸವರಾಜ್, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts