ಅಂಚೆ ನೌಕರರ ಸಮಸ್ಯೆಗೆ ಶೀಘ್ರ ಸ್ಪಂದಿಸುವ ಭರವಸೆ

ಚಿಕ್ಕಮಗಳೂರು: ನೌಕರರ ಯಾವುದೇ ಸಮಸ್ಯೆಗಳಿದ್ದರೂ ಶೀಘ್ರ ಸ್ಪಂದಿಸಲಾಗುವುದು ಎಂದು ಸಹಾಯಕ ಅಂಚೆ ಅಧೀಕ್ಷಕ ರಾಧಾಕೃಷ್ಣ ಮಲ್ಯ ಭರವಸೆ ನೀಡಿದರು.

ನಗರದ ನಾಯ್ಡು ಬೀದಿ ಅಂಚೆ ಕಚೇರಿ ಸಭಾಂಗಣದಲ್ಲಿ ಭಾನುವಾರ ಅಖಿಲ ಭಾರತ ಅಂಚೆ ನೌಕರರ ಸಂಘ ಹಮ್ಮಿಕೊಂಡಿದ್ದ 27ನೇ ಜಂಟಿ ದ್ವೈವಾರ್ಷಿಕ ಅಧಿವೇಶನ ಉದ್ಘಾಟಿಸಿ ಮಾತನಾಡಿ, ಆಡಳಿತ ಮಂಡಳಿ ಮತ್ತು ನೌಕರರ ಸಂಬಂಧ ಎಲ್ಲಿವರೆಗೂ ಗಟ್ಟಿಯಾಗಿರುತ್ತದೋ ಆವರೆಗೆ ನಮ್ಮ ವಿಭಾಗ ಹೆಚ್ಚಿನ ಜನಸಂಪರ್ಕ ಸಾಧಿಸುತ್ತದೆ ಎಂದರು.

ನಮ್ಮ ವಿಭಾಗದಲ್ಲಿ ನೌಕರರ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಬಯಸುತ್ತೇವೆ. ನೌಕರರ ಸಮಸ್ಯೆಗಳ ಪರಿಹಾರ ಸಿಗಲು ಇಂತಹ ಸಭೆವರೆಗೂ ಕಾಯಬೇಕಿಲ್ಲ ಎಂದು ಹೇಳಿದರು.

ಕಚೇರಿ ಕೆಲಸಗಳ ಒತ್ತಡದ ನಡುವೆಯೂ ಇಂತಹ ಸಭೆಗಳಲ್ಲಿ ಭಾಗವಹಿಸಿದ್ದೀರಿ. ಮಲೆನಾಡು, ಬಯಲುಸೀಮೆ ಮತ್ತು ಜಿಲ್ಲಾ ಕೇಂದ್ರದಲ್ಲಿನ ನೌಕರರ ಸಮಸ್ಯೆಗಳು ವಿಭಿನ್ನವಾಗಿರುತ್ತವೆ. ಅಧಿವೇಶನಗಳಲ್ಲಿ ನೌಕರರೆಲ್ಲರೂ ಒಟ್ಟಾಗಿ ಸೇರಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.

Leave a Reply

Your email address will not be published. Required fields are marked *