ಸೌಲಭ್ಯ ಪಡೆಯಲು ವಿಫಲ

ಚಿಕ್ಕಮಗಳೂರು: ಅಸಂಘಟಿತ ಕಾರ್ವಿುಕರ ಹಿತರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ 26 ಕಾಯ್ದೆ ಜಾರಿ ಮಾಡಿದ್ದರೂ ಪೂರ್ಣ ಸೌಲಭ್ಯ ಪಡೆಯಲು ವಿಫಲರಾಗಿದ್ದಾರೆ ಎಂದು ಕಾರ್ವಿುಕ ಇಲಾಖೆ ಸಹಾಯಕ ಆಯುಕ್ತ ಕೆ.ಜಿ.ಜಾನ್​ಸನ್ ಹೇಳಿದರು.

ಜಿಲ್ಲಾ ಕಟ್ಟಡ ಕಾರ್ವಿುಕರ ಸಂಘ ಗುರುವಾರ ಆಯೋಜಿಸಿದ್ದ 3ನೇ ತಾಲೂಕು ಸಮಾವೇಶ ಉದ್ಘಾಟಿಸಿದ ಅವರು ಕಾರ್ವಿುಕ ನೋಂದಣಿ ಮತ್ತು ಸೌಲಭ್ಯ ಕುರಿತು ಮಾತನಾಡಿದರು.

ಅಸಂಘಟಿತರ ಏಳಿಗಾಗಿ ಹಲವು ಪ್ರಬಲ ಕಾಯ್ದೆ, ಕಾನೂನುಗಳಿವೆ. ಆದರೆ ಕಾರ್ವಿುಕರು ನೋಂದಣಿಗೆ ಆಸಕ್ತಿ ತೋರದ ಕಾರಣ ಶೇ.8ರಷ್ಟು ಜನ ಸೌಲಭ್ಯ ಪಡೆದುಕೊಳ್ಳುತ್ತಿಲ್ಲ. ಎಲ್ಲ ಅಸಂಘಟಿತ ಕಾರ್ವಿುಕರು ಸಮೀಪದ ಕಾರ್ವಿುಕ ಇಲಾಖೆ ಸಂರ್ಪಸಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡರೆ ಸಾಕಷ್ಟು ಸೌಲಭ್ಯ ಪಡೆಯಬಹುದು ಎಂದು ಕಿವಿಮಾತು ಹೇಳಿದರು.

2006ರಲ್ಲಿ ಕರ್ನಾಟಕ ಕಟ್ಟಡ ಇತರೆ ನಿರ್ಮಾಣ ಕಾರ್ವಿುಕ ನಿಯಮ ಹಾಗೂ ಕಟ್ಟಡ ಕಾರ್ವಿುಕ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಲಾಗಿದೆ. ಪಿಂಚಣಿ, ಆರೋಗ್ಯ ವೆಚ್ಚ ಮರುಪಾವತಿ, ಅಪಘಾತದಲ್ಲಿ ಮೃತರಾದರೆ ಪರಿಹಾರ ನೀಡಲಾಗುವುದು. ಮೂರು ವರ್ಷ ಕಾರ್ವಿುಕರಾಗಿ ಅನುಭವ ಇದ್ದು 60 ವರ್ಷ ಮೀರಿದವರಿಗೆ ಪಿಂಚಣಿ ಸೌಲಭ್ಯವಿದೆ. ಒಂದು ಕುಟುಂಬದ ಇಬ್ಬರ ಮದುವೆಗೆ ತಲಾ 50 ಸಾವಿರ ರೂ. ಪ್ರೋತ್ಸಾಹ ಧನ, ಇಬ್ಬರು ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ಶೈಕ್ಷಣಿಕ ವೆಚ್ಚ ನೀಡಲಾಗುವುದು. 2 ಲಕ್ಷ ರೂ. ತನಕ ಆರೋಗ್ಯವೆಚ್ಚ ಮರುಪಾವತಿ ಇದೆ. ಕಟ್ಟಡ ಕೆಲಸದ ಅಪಘಾತದಲ್ಲಿ ಮೃತರಾದರೆ ಐದು ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದರು.

18 ವರ್ಷದಿಂದ 60 ವರ್ಷದೊಳಗಿನ ಎಲ್ಲ ಕಟ್ಟಡ ಕಾರ್ವಿುಕರು ಕಾರ್ವಿುಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. 25 ರೂ. ಶುಲ್ಕ ಪಡೆದು ಗುರುತಿನ ಚೀಟಿ ನೀಡಲಾಗುತ್ತಿದೆ. ಶೀಘ್ರದಲ್ಲಿ ಸ್ಮಾರ್ಟ್​ಕಾರ್ಡ್ ಕೊಡಲಾಗುವುದು. ಕಟ್ಟಡ ನಿರ್ಮಾಣ ಕ್ಷೇತ್ರದ ಗ್ರಿಲ್, ಪೇಯಿಂಟಿಂಗ್ ಎಲ್ಲ ವೃತ್ತಿಯವರನ್ನೂ ಇದರಲ್ಲಿ ಸೇರಿಸಲಾಗಿದ್ದು ಕಾರ್ವಿುಕರು ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಕಟ್ಟಡ ಕಾರ್ವಿುಕ ಸಂಘದ ತಾಲೂಕು ಅಧ್ಯಕ್ಷ ಸಿ.ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಐಟಿಸಿಯು ಜಿಲ್ಲಾಧ್ಯಕ್ಷ ಕೆ. ಗುಣಶೇಖರ್, ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್ ಇದ್ದರು.

ಪೂರ್ಣ ಲಾಭ ದೊರೆಯುತ್ತಿಲ್ಲ

ಅಸಂಘಟಿತ ಕಾರ್ವಿುಕರಿಗೆ ಸಾಮಾಜಿಕ ಭದ್ರತೆಯ ಪೂರ್ಣ ಲಾಭ ಇನ್ನೂ ದೊರೆಯುತ್ತಿಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾರ್ವಿುಕರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ. ಕೈಗಾರಿಕೆ ಕಾರ್ವಿುಕರಿಗೆ ಸಿಗುವ ಎಲ್ಲ ಸೌಲಭ್ಯ ಅಸಂಘಟಿತರಿಗೂ ನೀಡಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಂ.ರೇಣುಕಾರಾಧ್ಯ ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ವಾಹನಗಳಲ್ಲಿ ಕರೆ ತರುವಾಗ ಕಡೂರಲ್ಲಿ 13 ತೋಟ ಕಾರ್ವಿುಕರು, ಇಂಥವರಿಗೆ ಕಾರ್ವಿುಕ ಇಲಾಖೆ ಹಾಗೂ ತೋಟಗಳ ಮಾಲೀಕರಿಂದ ಪರಿಹಾರ ದೊರೆತಿಲ್ಲ. ಇಲಾಖೆಯೂ ಇಂಥಹ ಕುಟುಂಬಗಳ ನೆರವಿಗೆ ಧಾವಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಕಾರ್ವಿುಕರ ಹಿತಕ್ಕೆ ಬಳಸಿ

ಸೆಸ್ ಅನುದಾನವನ್ನು ಅನ್ಯ ಕಾರ್ಯಗಳಿಗೆ ಬಳಸದೆ ಕಾರ್ವಿುಕರ ಹಿತಕ್ಕಾಗಿ ಉಪಯೋಗಿಸಬೇಕು ಎಂದು ಜಿಲ್ಲಾ ಕಟ್ಟಡ ಕಾರ್ವಿುಕರ ಸಂಘದ ಅಧ್ಯಕ್ಷ ಜಿ.ರಘು ಆಗ್ರಹಿಸಿದರು. ಅಸಂಘಟಿತ ಕಟ್ಟಡ ಕಾರ್ವಿುಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರೂ ಕಾರ್ವಿುಕ ಇಲಾಖೆ ಗಮನಹರಿಸುತ್ತಿಲ್ಲ. ಸಂಘ ಸ್ಥಾಪಿಸಿ ನಾಲ್ಕು ವರ್ಷವಾದರೂ ಸಣ್ಣಪುಟ್ಟ ಸೌಲಭ್ಯ ಕೊಡಿಸಲು ಸಾಕಷ್ಟು ಶ್ರಮಪಡಬೇಕಾಗಿದೆ. ಅಪಘಾತ ಪರಿಹಾರ ಕಾರ್ವಿುಕರಿಗೆ ನೀಡಲು ಅಧಿಕಾರಿಗಳು ಸತಾಯಿಸುತ್ತಿದಾರೆ. ಐದು ಲಕ್ಷ ರೂ. ತನಕ ಪರಿಹಾರ ನೀಡಲು ಅವಕಾಶವಿದ್ದರೂ ಅನಗತ್ಯ ಅಲೆದಾಡಿಸುತ್ತಿದ್ದಾರೆ ಎಂದರು.