ಪಂಚರಾಜ್ಯ ಫಲಿತಾಂಶ ಪರಿಣಾಮ: ಸೆನ್ಸೆಕ್ಸ್​ನಲ್ಲಿ ಭಾರಿ ಕುಸಿತ

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿರುವಂತೆಯೇ ಮತ್ತು ನಿನ್ನೆಯಷ್ಟೇ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಊರ್ಜಿತ್‌ ಪಟೇಲ್‌ ದಿಢೀರ್‌ ರಾಜೀನಾಮೆ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಬರೋಬ್ಬರಿ 500 ಅಂಕಗಳ ಕುಸಿತ ಕಂಡಿದೆ.

ಮಂಗಳವಾರ ವಹಿವಾಟು ಆರಂಭವಾಗುತ್ತಿರುವಂತೆಯೇ 34,458.86 ಅಂಕಗಳಲ್ಲಿ ವಹಿವಾಟು ನಡೆದು 305.60 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್‌(ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌), 15 ನಿಮಿಷಗಳಲ್ಲೇ 500 ಅಂಕ ಕುಸಿದು ವಹಿವಾಟು 34,460.58 ಇಳಿದಿದೆ.

ಅದರಂತೆಯೇ ನಿಫ್ಟಿ ಕೂಡ 10,356.85ರಲ್ಲಿ ವಹಿವಾಟು ನಡೆಸುತ್ತಿದ್ದು, 131.60 ಅಂಕಗಳ ಕುಸಿತ ಕಂಡಿದೆ. (ಏಜೆನ್ಸೀಸ್)