3 ರಾಜ್ಯಕ್ಕೆ ಭರ್ಜರಿ ಯೋಜನೆ

ಭೋಪಾಲ್: ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಕೆಲ ಗಂಟೆಗಳ ಮೊದಲು ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದಲ್ಲಿ 2000ಕ್ಕೂ ಅಧಿಕ ಸರ್ಕಾರಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ನೀತಿ ಸಂಹಿತೆ ಜಾರಿಯಾಗುವ ಆತಂಕದಲ್ಲಿ ಶನಿವಾರ ತರಾತುರಿಯಲ್ಲಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ರಾಜಸ್ಥಾನದ ಉದಯ್ಪುರ ಒಂದರಲ್ಲೇ 1500 ಕಲ್ಯಾಣ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಮಧ್ಯಪ್ರದೇಶದಲ್ಲಿ 48 ಗಂಟೆಯಲ್ಲಿ 2415 ಕೋಟಿ ರೂ. ಮೊತ್ತದ 352 ಯೋಜನೆಗಳಿಗೆ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಲಾಗಿದೆ. ಮಾಧ್ಯಮಿಕ ಶಿಕ್ಷಣ ಕಾರ್ಯಾಲಯ ಸೇರಿ ಹಲವು ಯೋಜನೆಗಳಿಗೆ ಆನ್​ಲೈನ್ ಮೂಲಕ ರಾಜಸ್ಥಾನ ಸಿಎಂ ವಸುಂಧರಾ ರಾಜೇ ಶಿಲಾನ್ಯಾಸ ನೆರವೇರಿಸಿದರು.

ಪೇಯ್್ಡ ನ್ಯೂಸ್ ಮೇಲೆ ನಿಗಾ: ಪ್ರಾಯೋಜಿತ (ಕಾಸಿಗಾಗಿ ಸುದ್ದಿ) ಕಾರ್ಯಕ್ರಮಗಳ ಮೇಲೆ ನಿಗಾ ಇಡಲು ಚುನಾವಣಾ ಆಯೋಗ ಪ್ರತ್ಯೇಕ ಮಾನಿಟರಿಂಗ್ ಸೆಂಟರ್ ತೆರೆಯಲಿದೆ.

ಸಿ ವೋಟರ್- ಎಬಿಪಿ ಸಮೀಕ್ಷೆ

ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸಿ ವೋಟರ್-ಎಬಿಪಿ ಸಮೀಕ್ಷೆ ಹೇಳಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಢಗಳಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆಯುವ ಸಾಧ್ಯತೆ ಇದೆ. ಈ ಮೂರೂ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನರು ಮುನಿಸಿಕೊಂಡಿಲ್ಲ. ಅರ್ಧಕ್ಕೂ ಹೆಚ್ಚು ಜನರು ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಬೇಕು ಎಂದಿದ್ದಾರೆ.