ಅಭಿವೃದ್ಧಿ ಕಾರ್ಯಗಳಾಗಿಲ್ಲ ಎಂದು ಗ್ರಾಮಸ್ಥರಿಂದ ಚುನಾವಣೆ​ ಬಹಿಷ್ಕಾರ

ರಾಯಚೂರು: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲ…ಜಿಲ್ಲೆಯ ಜನರ ಕಷ್ಟಗಳನ್ನ ಕೇಳೋರಿಲ್ಲ..! ಪ್ರಾಣವನ್ನ ಕೈಯಲ್ಲಿಡಿದು ಗ್ರಾಮಸ್ಥರು ನದಿ ದಾಟುತ್ತಾರೆ…

ಹೌದು, ಈ ಎಲ್ಲ ನ್ಯೂನ್ಯತೆಗಳು ಕಂಡುಬಂದಿರುವುದು ಕಡದರಗಡ್ಡಿ ಗ್ರಾಮದಲ್ಲಿ. ಚುನಾವಣೆಯಲ್ಲಿ ಆಯ್ಕೆಯಾದ ಯಾವ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಮತ ಯಾಚಿಸಲು ಕೇವಲ ಪೊಳ್ಳು ಭರವಸೆಗಳನ್ನು ನೀಡುತ್ತಾರೆ ಎಂದು ಆಪಾದಿಸಿ 600ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಈ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.

ಗ್ರಾಮದಿಂದ ಕೇವಲ 12 ಕಿ.ಮೀ ದೂರದ ತಾಲೂಕು ಕೇಂದ್ರ ಲಿಂಗಸಗೂರಿಗೆ 42 ಕಿ.ಮೀ ಸುತ್ತಿಕೊಂಡು ಹೋಗಬೇಕಿದೆ. ಈ ಗ್ರಾಮ ಕೃಷ್ಣ ನದಿಯ ದಂಡೆಯಲ್ಲಿದ್ದು, ಮಳೆಗಾಲದಲ್ಲಿ ಪ್ರವಾಹ ಬಂದಾಗ ಈ ಗ್ರಾಮ ನಡುಗಡ್ಡೆಯಾಗಿ ಮಾರ್ಪಾಡಾಗುತ್ತೆ. ಇನ್ನು ಪ್ರವಾಹ ತಗ್ಗಿದರೂ ಜನರ ಗೋಳು ಮಾತ್ರ ತಪ್ಪುವುದಿಲ್ಲ ಎಂದು ಗ್ರಾಮಸ್ಥರೊಬ್ಬರು ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.

10 ಅಥವಾ 15 ಕಿಮೀ ದೂರದ ಸ್ಥಳಕ್ಕೆ ತಲುಪು 45ರಿಂದ 50 ಕಿಮೀ ಮಾರ್ಗದಿಂದ ಹೋಗಬೇಕಾಗಿದೆ. ನಮ್ಮ ಗ್ರಾಮಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆಯೇ ಇಲ್ಲ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ. ಈ ಸಂಬಂಧ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮತಕ್ಕಾಗಿಯಾದರೂ ಜನರ ಸಮಸ್ಯೆ ದೂರ ಮಾಡಬಹುದೇ ಎಂಬ ಆಸೆಯಿಂದ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *