ಯಾವ ಮುಖ ಇಟ್ಟುಕೊಂಡು ವೋಟ್ ಕೇಳೋದಕ್ಕೆ ಬಂದಿದ್ದೀರಾ?

<<ಪ್ರಚಾರಕ್ಕೆ ಹೋದ ಸಚಿವರಿಗೆ ಗ್ರಾಮಸ್ಥರ ತರಾಟೆ!>>

ಹಾಸನ: ಹತ್ತು ವರ್ಷಗಳಿಂದ ಶಾಸಕರಾಗಿ ಏನು ಮಾಡಿದ್ದೀರಾ? ಯಾವ ಮುಖ ಇಟ್ಟುಕೊಂಡು ಓಟು ಕೇಳೋದಕ್ಕೆ ಬಂದಿದ್ದೀರಾ?
ಹೀಗೆಂದು ಹೇಳುವ ಮೂಲಕ ಅರಕಲಗೂಡಿನ ಕೆಲ್ಲೂರು ಗ್ರಾಮದಲ್ಲಿ ವಿಧಾನಸಭೆ ಚುನಾವಣೆ ಮತ ಪ್ರಚಾರಕ್ಕೆ ಹೋದ ಸಚಿವ ಎ.ಮಂಜುಗೆ ಗ್ರಾಮಸ್ಥರು ಸಖತ್​​​​​ ಆಗಿ ಕ್ಲಾಸ್​​ ತೆಗೆದುಕೊಂಡರು.

ಸರಿಯಾಗಿ ಮೂಲಭೂತ ಸೌಕರ್ಯ ನೀಡಲು ನೀವು ಅಸಮರ್ಥರಾಗಿದ್ದೀರಾ. ಚುನಾವಣೆ ಬಂತು ಅಂತ ಈಗ ವೋಟ್​ ಕೇಳಲು ಬಂದಿದ್ದೀರಾ? ನಿಮ್ಮಂಥವರಿಗ್ಯಾಕೆ ನಾವು ಮತ ನೀಡಬೇಕು ಎಂದು ಮತ್ತಷ್ಟು ಪ್ರಶ್ನೆಗಳನ್ನು ಕೇಳುತ್ತಾ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮಸ್ಥರ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಸಚಿವ ಎ.ಮಂಜು ಸರಿಯಾಗಿ ಉತ್ತರಿಸಲು ಬಾರದೇ ಮಾತಿನ ಚಕಮಕಿ ನಡೆಸಿ, ಗ್ರಾಮದಿಂದ ವಾಪಾಸಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *