More

    ತಾಯಿಗೆ ಉದ್ಯೋಗ ಕೊಟ್ಟವನ ಮೇಲೆ ಹಲ್ಲೆ

    ಬೆಂಗಳೂರು: ತಾಯಿಗೆ ಉದ್ಯೋಗ ನೀಡಿದ್ದನ್ನು ಪ್ರಶ್ನಿಸಿ ಗಲಾಟೆ ತೆಗೆದ ಪುತ್ರ ವಾಹನ ಶೋರೂಂ ಮುಖ್ಯಸ್ಥನ ಮೇಲೆ ಲಾಂಗ್​ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

    ಕಲ್ಕೆರೆ ಮುಖ್ಯರಸ್ತೆಯಲ್ಲಿರುವ ಕಲ್ಯಾಣಿ ಮೋಟಾರ್ಸ್​ನ ಮುಖ್ಯಸ್ಥ ಶರತ್​ರಾಜ್ ಹಲ್ಲೆಗೊಳ ಗಾಗಿದ್ದು, ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಆರೋಪಿ ಮಾರುತಿ ಎಂಬಾತನ ವಿರುದ್ಧ ರಾಮ ಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ರಾಮಮಮೂರ್ತಿನಗರದ ಅಮರಾವತಿ ಎಂಬಾಕೆ 6 ತಿಂಗಳಿನಿಂದ ಹೊರಮಾವು ಬಳಿ ಕಲ್ಕೆರೆ ಮುಖ್ಯರಸ್ತೆಯಲ್ಲಿರುವ ಕಲ್ಯಾಣಿ ಮೋಟಾರ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಆಕೆಯ ಪುತ್ರ ಮಾರುತಿ ಬುಧವಾರ (ಜ.8) ಸಂಜೆ 5 ಗಂಟೆಯಲ್ಲಿ ಶೋರೂಂ ಬಳಿ ಹೋಗಿ, ತಾಯಿಗೆ ನೌಕರಿ ಕೊಟ್ಟಿದ್ದನ್ನು ಪ್ರಶ್ನಿಸಿ ಶೋರೂಂ ನೌಕರರ ಜತೆ ಗಲಾಟೆ ತೆಗೆದಿದ್ದಾನೆ. ತನ್ನ ಬಳಿಯಿದ್ದ ಲಾಂಗ್​ನಿಂದ ಮಳಿಗೆಯಲ್ಲಿನ ಪೀಠೋಪಕರಣಗಳನ್ನು ಹಾಳು ಮಾಡಿದ್ದಾನೆ. ಗಲಾಟೆ ತಡೆಯಲು ಮುಂದಾದ ಶರತ್ ಮೇಲೆ ಲಾಂಗ್​ನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts