ಹಾಸನ: ಯುವತಿಯೊಬ್ಬಳ ಜತೆ ಅಸಭ್ಯವಾಗಿ ವರ್ತಿಸಿದ ಎಂಬ ಆರೋಪದ ಮೇಲೆ ಯುವಕನೊಬ್ಬನ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದಲ್ಲದೆ, ಆತನನ್ನು ರಸ್ತೆಯಲ್ಲಿ ಬೆತ್ತಲಾಗಿಸಿ ಎಳೆದೊಯ್ಯಲಾಗಿದೆ. ಹಾಸನದಲ್ಲಿ ಇಂಥದ್ದೊಂದು ವಿಲಕ್ಷಣ ಘಟನೆ ನಡೆದಿದೆ.
ಹಾಸನ ಹೇಮಾವತಿ ಪ್ರತಿಮೆ ಸಮೀಪದ ಮಹಾರಾಜ ಪಾರ್ಕ್ನಲ್ಲಿ ಯುವತಿಯೊಬ್ಬಳನ್ನು ಎಳೆದಾಡಿದ ಎಂಬ ಆರೋಪದ ಮೇಲೆ ಯುವಕರ ಗುಂಪೊಂದು ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದೆ.
ಯುವತಿ ಜತೆ ಅಸಭ್ಯವಾಗಿ ವರ್ತಿಸಿದನೆಂದು ಸ್ಥಳಿಯರು ಆತನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಟ್ಟೆ ಬಿಚ್ಚಿಸಿ ಸಾರ್ವಜನಿಕವಾಗಿ ಎಳೆದೊಯ್ದಿದೆ. ಕೈ ಮುಗಿದು ಬೇಡಿಕೊಂಡರೂ ಜನರು ಆತನನ್ನು ಬಿಡದೆ ಬೆತ್ತಲಾಗಿಸಿ ಥಳಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ರಕ್ಷಿಸಿದ್ದು, ತೊಡಲು ಬಟ್ಟೆ ಕೊಟ್ಟು, ವಶಕ್ಕೆ ಪಡೆದಿದ್ದಾರೆ. ಥಳಿಸಿದ ಗುಂಪಿನ ಜನರನ್ನು ಚದುರಿಸಿ ಕಳುಹಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ರಜೆ ವಿಚಾರ; ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಸಿಎಂ ಮಹತ್ವದ ನಿರ್ಧಾರ