ಹೆಮ್ಮಾಡಿ ಮೀನು ಮಾರುವವಳ ಸಾವು ಸಹಜವಲ್ಲ, ಕೊಲೆ !

ಕುಂದಾಪುರ: ಹೆಮ್ಮಾಡಿ ಕೊಲ್ಲೂರು ರಾಜ್ಯ ಹೆದ್ದಾರಿ ಹರೆಗೋಡು ಬಳಿ ಮನೆಯಲ್ಲಿ ಶುಕ್ರವಾರ ಪತ್ತೆಯಾದ ಮಹಿಳೆಯ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಈಕೆಯದ್ದು ಸಹಜ ಸಾವಲ್ಲ, ಕೊಲೆ ಎಂಬುದು ಸ್ಪಷ್ಟಗೊಂಡಿದೆ.

ಹೆಮ್ಮಾಡಿ ಮೀನು ಮಾರಾಟ ಮಹಿಳೆ ಗುಲಾಬಿ(55) ಮೃತಪಟ್ಟ ಮಹಿಳೆ. ಗುರುವಾರ ರಾತ್ರಿ ಮಹಿಳೆ ಮೃತಪಟ್ಟಿದ್ದು ಶುಕ್ರವಾರ ಬೆಳಗ್ಗೆ ಗೊತ್ತಾಗಿತ್ತು. ಅದೊಂದು ಅಸಹಜ ಸಾವು ಎಂಬ ಸಂಶಯ ವ್ಯಕ್ತವಾಗಿತ್ತು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಉಸಿರು ಕಟ್ಟಿ ಸತ್ತಿರುವುದು ದೃಢಪಟ್ಟಿದೆ.

ಘಟನೆಗೆ ಸಂಬಂಧಪಟ್ಟಂತೆ ಸ್ಥಳೀಯ ಓರ್ವ ವ್ಯಕ್ತಿ, ಹೊರರಾಜ್ಯದ ಕಾರ್ಮಿಕರು ಸೇರಿ ಏಳುಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *