ಬೆಂಗಳೂರು: ಆತಿಥೇಯ ಬೆಂಗಳೂರು ಈಗಲ್ಸ್ ತಂಡ 3ನೇ ಆವೃತ್ತಿಯ ಎಬಿಲಿಟಿ ಸ್ಪೋರ್ಟ್ಸ್ ಲೀಗ್ (ಎಎಸ್ಎಲ್) ಅಂಗವಿಕಲರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಬುಧವಾರ ನಡೆದ ಇನ್ನೆರಡು ಪಂದ್ಯಗಳಲ್ಲಿ ಚೆನ್ನೈ ಲೆಜೆಂಡ್ಸ್ ತಂಡ ಲಖನೌ ಮಾವೆರಿಕ್ಸ್ ಎದುರು 9 ವಿಕೆಟ್ಗಳಿಂದ ಗೆಲುವು ಸಾಧಿಸಿದರೆ, ಮುಂಬೈ ಫೈಟರ್ಸ್ ತಂಡ ಚಂಡೀಗಢ ಲಯನ್ಸ್ ಎದುರು 5 ರನ್ಗಳಿಂದ ಪರಾಭವಗೊಂಡಿತು.
ಬೆಂಗಳೂರು ಹೊರವಲಯದ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ 2ನೇ ದಿನದ ಮೊದಲ ಪಂದ್ಯದಲ್ಲಿ ಬೆಂಗಳೂರು ಈಗಲ್ಸ್ ತಂಡ ಗ್ವಾಲಿಯರ್ ವಾರಿಯರ್ಸ್ ವಿರುದ್ಧ 34 ರನ್ಗಳಿಂದ ಗೆಲುವು ಸಾಧಿಸಿತು. ಬೆಂಗಳೂರು ಈಗಲ್ಸ್ ತಂಡ ಮೊದಲ ದಿನ ಲಖನೌ ಮಾವೆರಿಕ್ಸ್ ವಿರುದ್ಧ ಗೆದ್ದಿತ್ತು.
ಹರೀಶ್ಕುಮಾರ್ (55), ಶೈಲೇಶ್ ಯಾದವ್ (50) ಉತ್ತಮ ಆಟದಿಂದ ಬೆಂಗಳೂರು ಈಗಲ್ಸ್ ತಂಡ 15 ಓವರ್ಗಳಲ್ಲಿ 4 ವಿಕೆಟ್ಗೆ 172 ರನ್ ಪೇರಿಸಿತು. ಪ್ರತಿಯಾಗಿ ಗ್ವಾಲಿಯರ್ ವಾರಿಯರ್ಸ್ ತಂಡ 15 ಓವರ್ಗಳಲ್ಲಿ 5 ವಿಕೆಟ್ಗೆ 138 ರನ್ ಗಳಿಸಲಷ್ಟೇ ಶಕ್ತವಾಯಿತು.
ಡಿ. 18-19ಕ್ಕೆ ಎಸ್ಒಜಿ ಗ್ರ್ಯಾಂಡ್ಮಾಸ್ಟರ್ಸ್ ಸರಣಿಗೆ ಬೆಂಗಳೂರು ಆತಿಥ್ಯ; ಕನ್ನಡಿಗ ರಾಬಿನ್ ಉತ್ತಪ್ಪ ಕಣಕ್ಕೆ