ರಿಲೇಯಲ್ಲಿ ಜೀವನ್‌ಗೆ ದ್ವಿತೀಯ ಸ್ಥಾನ, ಸನ್ಮಾನ

ಸೋಮವಾರಪೇಟೆ: ಏಷ್ಯನ್ ಗೇಮ್ಸ್‌ನ 400ಮೀ. ರಿಲೇಯಲ್ಲಿ ಭಾರತ ತಂಡ ಪ್ರತಿನಿಧಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದ ತಾಲೂಕಿನ ಕಾರೇಕೊಪ್ಪದ ಜೀವನ್ ಅವರನ್ನು ಇಲ್ಲಿನ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಜೀವನ್ ಮಾತನಾಡಿ, ಏಷ್ಯನ್ ಗೇಮ್ಸ್‌ನಲ್ಲಿ ಸಾಧನೆ ಮಾಡಿದ ಹೆಮ್ಮೆಯಿದೆ. ಮುಂದಿನ ದಿನಗಳಲ್ಲಿ ಅಥ್ಲೆಟಿಕ್ಸ್‌ನಲ್ಲಿ ಇನ್ನಷ್ಟು ಸಾಧನೆ ಮಾಡುವ ಬಯಕೆ ಇದೆ. ಪಾಲಕರೊಂದಿಗೆ ಮುಖ್ಯ ತರಬೇತುದಾರ ಪಿ.ಬಿ.ಗೆಲಿನಾ ಅವರ ಪ್ರೋತ್ಸಾಹ ಸಾಧನೆಗೆ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಚ್.ಎನ್.ಅಶೋಕ್ ಮಾತನಾಡಿ, ಕ್ರೀಡೆಗಳು ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವುದಲ್ಲದೆ, ವಿದ್ಯಾರ್ಥಿ ದಿಸೆಯಲ್ಲಿಯೇ ಕ್ರೀಡೆಯಲ್ಲಿ ಸಾಧನೆ ತೋರಿದರೆ ಉತ್ತಮ ಉದ್ಯೋಗದೊಂದಿಗೆ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಬಿ.ಎಂ. ಸುರೇಶ್, ಹಿಂದೂಸ್ಥಾನ್ ಫುಟ್ಬಾಲ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಕಿಬ್ಬೆಟ್ಟ ಮಧು, ಡಾಲ್ಪೀನ್ಸ್ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ವಿನಾಯಕ, ಗೌರವಾಧ್ಯಕ್ಷ ಗಿರೀಶ್, ಜೀವನ್ ಅವರ ತಂದೆ ಸುರೇಶ್ ಇದ್ದರು.
ಇದೇ ಸಂದರ್ಭ ಜೇಸೀ ಸಂಸ್ಥೆಯಿಂದ ಜೀವನ್ ಅವರನ್ನು ಸನ್ಮಾನಿಸಲಾಯಿತು.
ಚಿತ್ರ: 29ಎಸ್‌ಪಿಟಿ2
ಏಷ್ಯನ್ ಗೇಮ್ಸ್‌ನ 400 ಮೀ.ರಿಲೇಯಲ್ಲಿ ಭಾರತ ತಂಡ ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ ಸೋಮವಾರಪೇಟೆ ಸಮೀಪದ ಕಾರೇಕೊಪ್ಪದ ಜೀವನ್ ಅವರನ್ನು ಸನ್ಮಾನಿಸಲಾಯಿತು.

29ಎಸ್ಪಿಟಿ3
ಏಷ್ಯನ್ ಗೇಮ್ಸ್‌ನ 400 ಮೀ.ರಿಲೆಯ ಭಾರತ ತಂಡದ ಸದಸ್ಯ ಸೋಮವಾರಪೇಟೆ ಕಾರೇಕೊಪ್ಪ ಗ್ರಾಮದ ಜೀವಜೀವನ್ ಮಾತನಾಡಿದರು.