ಏಷ್ಯನ್‌ ಗೇಮ್ಸ್‌ 2018: ಟೇಬಲ್‌ ಟೆನ್ನಿಸ್‌ನಲ್ಲಿ ಭಾರತಕ್ಕೆ ಒಲಿದ 51ನೇ ಪದಕ

ಜಕಾರ್ತಾ: ಏಷ್ಯನ್​ ಗೇಮ್ಸ್​ನ ಟೇಬಲ್‌ ಟೆನ್ನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಅಚಂತ್‌ ಶರತ್‌ ಕಮಲ್‌ ಮತ್ತು ಮಣಿಕಾ ಬಾತ್ರಾ ಜೋಡಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌-2018ರ ಟೇಬಲ್‌ ಟೆನ್ನಿಸ್‌ ಮಿಶ್ರ ಡಬಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಚೀನಾದ ಯಿಂಗ್ಶಾ ಸನ್‌ ಮತ್ತು ಚುಕಿನ್ ವಾಂಗ್ ಜೋಡಿಯಿಂದ 1-4 ಅಂತರದ ಸೋಲು ಕಂಡು, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.

ಈ ದಿನದ ಆರಂಭಕ್ಕೆ ಮೊದಲು ಭಾರತಕ್ಕೆ ಕಂಚಿನ ಪದಕ ಸಿಕ್ಕಿದ್ದು, ಏಷ್ಯನ್‌ ಗೇಮ್ಸ್‌ನ ಟೇಬಲ್‌ ಟೆನ್ನಿಸ್‌ನಲ್ಲಿ ಎರಡನೇ ಪದಕ ದೊರೆತಿದೆ. ಇದರೊಂದಿಗೆ ಭಾರತಕ್ಕೆ 51 ಕಂಚಿನ ಪದಕ ಸಿಕ್ಕಂತಾಗಿದೆ. (ಏಜೆನ್ಸೀಸ್)