ಏಷ್ಯನ್​ ಗೇಮ್ಸ್​ 2018: ರೋಯಿಂಗ್​ನಲ್ಲಿ ಭಾರತಕ್ಕೆ ಎರಡು ಕಂಚು

ಜಕಾರ್ತಾ: ಏಷ್ಯನ್​ ಗೇಮ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಬೇಟೆ ಮುಂದುವರೆಸಿದ್ದು, ರೋಯಿಂಗ್​ನ ಸಿಂಗಲ್​ ಸ್ಕಲ್ಸ್​ನಲ್ಲಿ ದುಷ್ಯಂತ್​ ಹಾಗೂ ಡಬಲ್​​ ಸ್ಕಲ್ಸ್​ನಲ್ಲಿ ರೋಹಿತ್​ ಕುಮಾರ್​ ಮತ್ತು ಭಗವಾನ್​ ದಾಸ್​ ಕಂಚಿನ ಪದಕ ಗೆದ್ದಿದ್ದಾರೆ.

ರೋಯಿಂಗ್​ನ ಪುರುಷರ ವಿಭಾಗದ ಲೈಟ್​ವೇಟ್​ ಸಿಂಗಲ್ಸ್​ ಸ್ಕಲ್ಸ್​ ಫೈನಲ್​ನಲ್ಲಿ ದುಷ್ಯಂತ್​ 7 ನಿಮಿಷ 18 ಸೆಕೆಂಡಿನಲ್ಲಿ ಪೂರ್ಣಗೊಳಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟರು. ಕೊರಿಯಾದ ಹ್ಯುನ್ಸು ಪಾರ್ಕ್​ ಚಿನ್ನದ ಪದಕ ಹಾಗೂ ಹಾಂಗ್​ ಕಾಂಗ್​ನ ಚುನ್​ ಗುನ್​ ಚಿಯು ಬೆಳ್ಳಿ ಪದಕ ಗೆದ್ದರು.

ಇನ್ನು ಪುರುಷರ ವಿಭಾಗದ ಲೈಟ್​ವೇಟ್​​ ಡಬಲ್​ ಸ್ಕಲ್ಸ್​ನಲ್ಲಿ ರೋಹಿತ್​ ಕುಮಾರ್​ ಹಾಗೂ ಭಗವಾನ್​ ದಾಸ್ ​ಕಂಚಿನ ಪದಕ ಜಯಿಸಿದ್ದಾರೆ. (ಏಜೆನ್ಸೀಸ್​)