ಏಷ್ಯನ್​ ಗೇಮ್ಸ್​ 2018: ಮಹಿಳಾ ಸಿಂಗಲ್ಸ್​ ಟೆನ್ನಿಸ್​ನಲ್ಲಿ ಭಾರತದ ಅಂಕಿತಾ ರೈನಾಗೆ ಕಂಚು

ಜಕಾರ್ತಾ: ಭಾರತದ ಅಂಕಿತಾ ರೈನಾ ಏಷ್ಯನ್​ ಗೇಮ್ಸ್​ 2018ರ ಮಹಿಳಾ ಟೆನ್ನಿಸ್​ ಸಿಂಗಲ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಸೆಮಿ ಫೈನಲ್​ ಪಂದ್ಯದಲ್ಲಿ ಚೀನಾದ ಝಾಂಗ್​ ಶುಯಿ​ ವಿರುದ್ಧ 4-6, 6-7(6) ಅಂತರದಲ್ಲಿ ಸೋಲು ಕಂಡು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಏಷ್ಯನ್​ ಗೇಮ್​ನ ಮಹಿಳಾ ಟೆನ್ನಿಸ್​ ವಿಭಾಗದಲ್ಲಿ ಸಾನಿಯಾ ಮಿರ್ಜಾ 2006ರಲ್ಲಿ ಬೆಳ್ಳಿ ಹಾಗೂ 2010ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಸಾನಿಯಾ ಮಿರ್ಜಾರನ್ನು ಹೊರತು ಪಡಿಸಿದರೆ ಏಷ್ಯನ್ ಗೇಮ್ಸ್​ನ ಸಿಂಗ್ಲ್ಸ್​ ಟೆನ್ನಿಸ್​ ವಿಬಾಗದಲ್ಲಿ ಪದಕ ಪಡೆದ ಎರಡನೇ ಆಟಗಾರ್ತಿ ಕೀರ್ತಿಗೆ ಅಂಕಿತಾ ಭಾಜನರಾಗಿದ್ದಾರೆ. (ಏಜೆನ್ಸೀಸ್​)