ಗೋಮತಿ ಅಮಾನತು: ಉದ್ದೀಪನ ಪರೀಕ್ಷೆಯಲ್ಲಿ ಅಥ್ಲೀಟ್ ವಿಫಲ

ನವದೆಹಲಿ: ಕಳೆದ ತಿಂಗಳು ದೋಹಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನ ಮಹಿಳೆಯರ 800ಮೀಟರ್ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದ ತಮಿಳುನಾಡಿನ ಅಥ್ಲೀಟ್ ಗೋಮತಿ ಮಾರಿಮುತ್ತು ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಇದರ ಬೆನ್ನಲ್ಲಿಯೇ ರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್​ಐ) ತಾತ್ಕಾಲಿಕ ಅಮಾನತು ಶಿಕ್ಷೆ ವಿಧಿಸಿದೆ.

ಏಪ್ರಿಲ್ 22 ರಂದು ನಡೆದಿದ್ದ ಸ್ಪರ್ಧೆಯಲ್ಲಿ 2ನಿಮಿಷ 2.70 ಸೆಕೆಂಡ್​ನಲ್ಲಿ ಗುರಿ ಕ್ರಮಿಸಿ ಸ್ವರ್ಣ ಜಯಿಸಿದ್ದ 30 ವರ್ಷದ ಗೋಮತಿ ಮಾರಿಮುತ್ತು ಎ ಸ್ಯಾಂಪಲ್​ನಲ್ಲಿ ನಿಷೇಧಿತ ಔಷಧಿ ಸೇವಿಸಿರುವುದು ಖಚಿತವಾಗಿದೆ. ಹಾಗೇನಾದರೂ ಬಿ ಸ್ಯಾಂಪಲ್​ನಲ್ಲೂ ವಿಫಲರಾದಲ್ಲಿ ಮೊದಲ ಬಾರಿ ಈ ಪ್ರಕರಣದಲ್ಲಿ ಭಾಗಿಯಾದ ಕಾರಣಕ್ಕೆ ಗರಿಷ್ಠ ನಾಲ್ಕು ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಲಿದ್ದಾರೆ. ಅದಲ್ಲದೆ, ಭಾರತ ತಂಡ ಕೂಡ ಏಷ್ಯನ್ ಚಾಂಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕವನ್ನು ಕಳೆದುಕೊಳ್ಳಲಿದೆ. ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಭಾರತ 3 ಸ್ವರ್ಣ, 7 ಬೆಳ್ಳಿ ಹಾಗೂ 7 ಕಂಚಿನ ಪದಕ ಜಯಿಸಿತ್ತು.

Leave a Reply

Your email address will not be published. Required fields are marked *