Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಏಷ್ಯಾಕಪ್​ನಲ್ಲಿ ಧೋನಿ ಔಟಾದಾಗ ಪುಟ್ಟ ಅಭಿಮಾನಿಯ ಸಂಕಟ ಹೀಗಿತ್ತು… ವಿಡಿಯೋ ನೋಡಿ

Wednesday, 19.09.2018, 11:42 AM       No Comments

ದುಬೈ: ಏಷ್ಯಾಕಪ್​ನಲ್ಲಿ ಹಾಂಕಾಂಗ್​ ವಿರುದ್ಧದ ಪಂದ್ಯದಲ್ಲಿ ಎಂ.ಎಸ್​.ಧೋನಿ ಒಂದೂ ರನ್​ ತೆಗೆಯಲಾಗದೆ ಹೋದರು. ಅವರು ಶೂನ್ಯಕ್ಕೆ ಔಟ್​ ಆದಾಗ ಅವರ ಅಭಿಮಾನಿ, ಪುಟ್ಟಬಾಲಕನ ಪ್ರತಿಕ್ರಿಯೆ ತುಂಬ ಹತಾಶೆಯಿಂದ ಕೂಡಿತ್ತು. ಧೋನಿ ಹೊರನಡೆದಾಗ ಬಾಲಕನ ದುಃಖ ಭರಿತ ಪ್ರತಿಕ್ರಿಯೆಯನ್ನು ಅಲ್ಲಿಯೇ ಇದ್ದ ಕ್ಯಾಮರಾ ಸೆರೆ ಹಿಡಿದಿದೆ.

ಎಂ.ಎಸ್​.ಧೋನಿ ಬ್ಯಾಟ್​ ಹಿಡಿದು ಮೈದಾನಕ್ಕಿಳಿದಾಗ ಚಪ್ಪಾಳೆ ಹೊಡೆದು, ಮೇಲೆ ಹಾರುತ್ತ ಸಂತಸ ವ್ಯಕ್ತಪಡಿಸಿದ್ದ ಈ ಬಾಲಕ. ಆದರೆ ಮೂರು ಬಾಲ್​ಗಳನ್ನು ಎದುರಿಸಿ ಒಂದೂ ರನ್​ ಗಳಿಸದೆ ಪೆವಿಲಿಯನ್​ ಕಡೆ ಹೊರಟಾಗ ಅವನಿಗಾದ ಸಂಕಟ ಅಷ್ಟಿಷ್ಟಲ್ಲ. ಎಲ್ಲರಿಗೂ ನಿರಾಶೆಯಾದರೂ ಧೋನಿಯ ಪುಟ್ಟ ಅಭಿಮಾನಿ ತನ್ನ ದುಃಖ, ಹತಾಶೆಯನ್ನು ಹೊರಹಾಕಿದ ಪರಿ ಸ್ವಲ್ಪ ವಿಚಿತ್ರವಾಗಿ ಗಮನಸೆಳೆದಿದೆ.

ಧೋನಿ ಔಟ್​ ಆದಕೂಡಲೇ ಹಿಂಬದಿಯಲ್ಲಿದ್ದ ಚೇರಿಗೆ ಮೂರು ಸುತ್ತು ಗುದ್ದಿ, ಏದುಸಿರು ಬಿಡುತ್ತ, ಬಲಗಾಲನ್ನು ಅಪ್ಪಳಿಸಿ ಸಿಟ್ಟು, ನೋವು ಸಂಕಟವನ್ನು ಒಮ್ಮೆಲೆ ಹೊರಹಾಕಿದ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಧೋನಿ ಹೀಗೆ ಶೂನ್ಯ ಸಾಧನೆ ಮಾಡುವುದು ತುಂಬ ಅಪರೂಪ. ಆಡಿದ 322 ಏಕದಿನ ಪಂದ್ಯಗಳಲ್ಲಿ 9 ಬಾರಿ ಹೀಗಾಗಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ಹಾಂಗ್​ಕಾಂಗ್​ ವಿರುದ್ಧದ ಏಷ್ಯಾಕಪ್​ನಲ್ಲಿ ಭಾರತ 286 ರನ್​ಗಳ ಗುರಿಯನ್ನು ನೀಡಿತ್ತು. ಭಾರತದ ವಿರುದ್ಧ ಹಾಂಗ್​ಕಾಂಗ್​ಗೆ ಇದು ಮೊದಲ ಪಂದ್ಯ.

Leave a Reply

Your email address will not be published. Required fields are marked *

Back To Top