ಏಷ್ಯಾ ಕಪ್ ಫೈನಲ್: ಟಾಸ್​ ಗೆದ್ದ ಭಾರತ ಬೌಲಿಂಗ್​ ಆಯ್ಕೆ

ದುಬೈ: ಪ್ರತಿಷ್ಠಿತ ಏಷ್ಯಾ ಕಪ್​ 2018 ಟೂರ್ನಿಯ ಫೈನಲ್​ ಪಂದ್ಯ ಪ್ರಾರಂಭವಾಗಿದೆ. ಟ್ರೋಫಿಗಾಗಿ ಬಲಿಷ್ಠ ಭಾರತ ಮತ್ತು ಬಾಂಗ್ಲಾದೇಶ ಸೆಣಸಾಡಲಿದ್ದು, ಟಾಸ್​ ಗೆದ್ದಿರುವ ಭಾರತ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಟಾಸ್ ಗೆದ್ದವರಿಗೆ ಲಕ್!
ದುಬೈನಲ್ಲಿ ನಡೆದ 6 ಪಂದ್ಯಗಳ ಪೈಕಿ 4ರಲ್ಲಿ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಹಾಗಾಗಿ ಟಾಸ್ ಗೆದ್ದ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಾಗಿದ್ದು, ಟಾಸ್​ ಗೆದ್ದಿರುವ ಭಾರತಕ್ಕೆ ಪ್ರಾರಂಭದಲ್ಲೇ ಜಯದ ಮುನ್ಸೂಚನೆ ಸಿಕ್ಕಂತಾಗಿದೆ.

ಭಾರತ ತಂಡ ಈವರೆಗೂ ಐದು ಬಾರಿ ಏಷ್ಯಾಕಪ್ ಏಕದಿನ ಟೂರ್ನಿ ಜಯಿಸಿದ್ದರೆ, ಬಾಂಗ್ಲಾದೇಶ ತಂಡ 2012ರಲ್ಲಿ ರನ್ನರ್​ಅಪ್ ಆಗಿದ್ದು ಶ್ರೇಷ್ಠ ಸಾಧನೆಯಾಗಿದೆ. 2010ರಲ್ಲಿ ಭಾರತ ತಂಡ ಕೊನೆಯ ಬಾರಿಗೆ ಏಷ್ಯಾಕಪ್ ಏಕದಿನ ಟೂರ್ನಿಯ ಚಾಂಪಿಯನ್ ಆಗಿತ್ತು. ಆ ನಂತರದ ಎರಡು ಟೂರ್ನಿಗಳಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಜಯ ಕಂಡಿದ್ದವು. 2016ರ ಟಿ20 ಏಷ್ಯಾಕಪ್​ನಲ್ಲಿ ಭಾರತ ಪ್ರಶಸ್ತಿ ಜಯಿಸಿತ್ತು.