More

  ಹೆದರಿ ಓಡಿ ಹೋಗ್ತಿದ್ದಾರೆ ಏಕೆ?; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ: ಅಶ್ವಥ್​ ನಾರಾಯಣ

  ಕಲಬುರ್ಗಿ: ಇಂದು ಕಲಬುರ್ಗಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಅಶ್ವಥ್​ ನಾರಾಯಣ್​, “ಜಾತಿ ಗಣತಿ ಮಾಡ್ತಾ ಇದ್ದೆವೆ ಅಂತಾ ಸ್ಪಷ್ಟವಾಗಿ ಹೇಳುತ್ತಿಲ್ಲ ಬದಲಿಗೆ ಇದೊಂದು ಸಮೀಕ್ಷೆ ಅಂತ ಹೇಳ್ತಾರೆ. ಅಲ್ಲಿ ನೋಡಿದ್ರೆ ಜಾತಿಗಣತಿ ಅಂತಾರೆ, ಹಾಗಾಗಿ ಸ್ಪಷ್ಟತೆ ಇಲ್ಲದೆ, ಸಮೀಕ್ಷೆ ಮಾಡಿರೋದು ವೈಜ್ಞಾನಿಕವಾಗಿ ಮಾಡಿಲ್ಲ ಹಾಗೂ ಜನಪರವಾಗಿಲ್ಲ” ಎಂದು ರಾಜ್ಯ ಕಾಂಗ್ರೆಸ್​ ವಿರುದ್ಧ ಗುಡುಗಿದ್ದಾರೆ.

  ಇದನ್ನೂ ಓದಿ: ಬಿಗ್​ ಬಾಸ್​ Scripted ಶೋನಾ? ಈಶಾನಿಗೆ ಸಿಕ್ಕ ಪೇಮೆಂಟ್​ ಎಷ್ಟು?

  ಈ ಕುರಿತು ಮಾತು ಮುಂದುವರೆಸಿದ ಮಾಜಿ ಸಚಿವರು, “ಸಿದ್ದರಾಮಯ್ಯ ರಾಜಕೀಯ ಪ್ರೇರಿತವಾಗಿ ಮಾಡಿರುವ ಪ್ರಯತ್ನವಿದು. ಅವರಿಗೆ ಜನರ ಬಗ್ಗೆ ಕಾಳಜಿಯಿಲ್ಲ. ರಾಜಕೀಯ ಪ್ರೇರಿತವಾಗಿ ಕೆಲಸ ಮಾಡ್ತಿದ್ದಾರೆ” ಎಂದರು. ಇನ್ನು ವಿ. ಸೋಮಣ್ಣ ಸಿದ್ದಗಂಗಾ ಮಠದಲ್ಲಿ ಅಸಮಧಾನ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶ್ವಥ್​ ನಾರಾಯಣ್​, “ಸೋಮಣ್ಣನವರು ನಮ್ಮ ಹಿರಿಯ ನಾಯಕರು, ರಾಜಕೀಯ ಜೀವನದಲ್ಲಿ ಸೋಲು ಗೆಲುವು ಇದ್ದೇ ಇರುತ್ತೆ. ಅವರನ್ನು ಕೈ ಹಿಡಿದು ಜತೆಗೆ ಕರೆದುಕೊಂಡು ಹೋಗುವ ಕೆಲಸ ಬಿಜೆಪಿ ಮಾಡುತ್ತದೆ” ಎಂದರು.

  ಡಿ.ಕೆ. ಶಿವಕುಮಾರ್​ ಕೇಸ್ ವಾಪಸ್ ವಿಚಾರದ ಬಗ್ಗೆಯೂ ಮಾತನಾಡಿದ ಮಾಜಿ ಸಚಿವರು, “ಕಾಂಗ್ರೆಸ್ ಪಕ್ಷಕ್ಕೆ ಕಳ್ಳನಿಗೊಂದು ಪಿಳ್ಳೆ ನೆಪ. ಇಲ್ಲಿ ಎಲ್ಲಿಯೂ ಕಾನೂನು ಉಲ್ಲಂಘನೆಯಾಗಿಲ್ಲ. ಯಾರೇ ಅಧಿಕಾರ ದುರ್ಬಳಕೆ ಮಾಡಿದ್ರು ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಏನೇ ತಪ್ಪು ಮಾಡಿದರೂ ಇವರು ನ್ಯಾಯಾಲಯದಲ್ಲಿ ವಾದಿಸಬೇಕು” ಎಂದರು.

  ಇದನ್ನೂ ಓದಿ: ಚಿನ್ನದ ಕುದುರೆ… ನಿಜವಾಗಿಯೂ ಅಸ್ತಿತ್ವದಲ್ಲಿದೆ/ ವೇಗದಲ್ಲೂ ಮುಂದು ಶಕ್ತಿಯೂ ಅಪಾರ

  “ಬಿಜೆಪಿ ಸರ್ಕಾರದಲ್ಲಿ ನಾವು ಕಾನೂನು ಪ್ರಕಾರವೇ ಮಾಡಿದ್ದೇವೆ. ಕಾನೂನಿನ ಪ್ರಕಾರ ತಪ್ಪು ಮಾಡಿದ್ರೆ ಅದು ಊರ್ಜಿತವಾಗಲ್ಲ. ಈ ಹಿಂದೆಯೂ ಕೂಡ ಬೇರೆ ಬೇರೆ ಸರ್ಕಾರ ಸಿಬಿಐ ಕೇಸ್ ತನಿಖೆಗೆ ವಹಿಸಿ ಹಿಂದೆ ಪಡಯೋದಕ್ಕೆ ಮುಂದಾಗಿದ್ದರು. ಆದ್ರೆ ಸಿಬಿಐ ಕೇಸ್ ಹಿಂಪಡೆಯಲು ಹೋಗಿ ವಿಫಲವಾಗಿದೆ, ನ್ಯಾಯಲದಲ್ಲೂ ಕೂಡ ವಿಫಲವಾಗಲಿದೆ ಇದು” ಎಂದರು.

  “ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ. ಇವರು ಉತ್ತರ ಕೊಡಬೇಕು ಯಾಕೆ ಹೆದರುತ್ತಿದ್ದಾರೆ. ಹೆದರಿ ಯಾಕೆ ಓಡಿ ಹೋಗ್ತಿದ್ದಾರೆ? ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಇವರು ಲೂಟಿ ಮಾಡೋದನ್ನು ಬಿಟ್ಟು ಬೇರೆ ಏನೂ ಸಹ ಮಾಡ್ತಿಲ್ಲ. ಅಧಿಕಾರಕ್ಕೆ ಬಂದ ದಿನದಿಂದಲೂ ಸೇಡಿನ ರಾಜಕೀಯ ಮಾಡ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

  VIDEO | ಆಸ್ಟ್ರೇಲಿಯಾ ವಿರುದ್ಧ ಭಾರತ ವಿಶ್ವಕಪ್ ಸೋಲು; ಸೂರ್ಯಕುಮಾರ್ ಯಾದವ್ ಹೇಳಿದ್ದಿಷ್ಟು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts