ಅಧಿಕಾರಿಗಳು ಜನಪರ ಯೋಜನೆಗಳ ಅನುಷ್ಠಾನ ಮಾಡಲಿ

Ashoka Managuli, Bandala, People's Liaison Council, Officers, Janpara Yojana, Sindagi,

ಸಿಂದಗಿ: ಸರ್ಕಾರ ಮಹತ್ವಾಕಾಂಕ್ಷಿ ಜನಪರ ಯೋಜನೆಗಳನ್ನು ಜನ ಸಮುದಾಯಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಕಾಳಜಿವಹಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಸೂಚಿಸಿದರು.

ತಾಲೂಕಿನ ಬಂದಾಳ ಗ್ರಾಮದಲ್ಲಿ ಸೋಮವಾರ ನಡೆದ ಮೂರನೇ ಜನಸಂಪರ್ಕ ಸಭೆಯಲ್ಲಿ ಬಂದಾಳ, ಚಿಕ್ಕಸಿಂದಗಿ, ಬೂದಿಹಾಳ ಪಿಎಚ್. ಹಾಗೂ ಓತಿಹಾಳ ಗ್ರಾಮಗಳ ಜನರ ಅಹವಾಲು ಆಲಿಸಿ ಅವರು ಮಾತನಾಡಿ, ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯ ಗ್ರಾಪಂ ಅಧಿಕಾರಿಗಳು ತುರ್ತು ಕ್ರಮಗಳನ್ನು ವಹಿಸಬೇಕು ಎಂದರು.

ಬಂದಾಳ ಗ್ರಾಮದ ಮಹಿಳೆಯರು ಸಾರ್ವಜನಿಕ ಶೌಚಗೃಹದ ಬೇಡಿಕೆಯನ್ನಿಟ್ಟರೆ, ಸ್ಥಳೀಯ ಪ್ರಾಥಮಿಕ ಶಾಲೆಯ ಹೆಣ್ಣು ಮಕ್ಕಳ ಶೌಚಗೃಹ ಕಟ್ಟಡ ಮತ್ತು ಸ್ವಚ್ಛತೆ ನೀರಿನ ವ್ಯವಸ್ಥೆ ಸರಿಪಡಿಸುವಂತೆ ವಿದ್ಯಾರ್ಥಿ ಪಾಲಕರು ಶಾಸಕರಿಗೆ ಮನವಿ ಮಾಡಿದರು.

ಜೆಜೆಎಂ ಯೋಜನೆಯಡಿ ಸಂಪರ್ಕ ಪಡೆದ ನಳಗಳಿಗೆ ಸಮರ್ಪಕ ನೀರು ಸಿಗುತ್ತಿಲ್ಲ ಎಂದು ಕೆಲವರು ದೂರಿದರು. ಸಭೆಯಲ್ಲಿದ್ದ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ತಾರಾನಾಥ ರಾಠೋಡ ಮಾತನಾಡಿ, ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡಿದರೆ ಜನರಿಗೆ ನೀರು ಸಿಗುತ್ತದೆ ಎಂದರು. ಆಗ ಶಾಸಕ ಮನಗೂಳಿ ಅವರು ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಇಂಜಿನಿಯರ್‌ಗೆ ಸೂಚಿಸಿದರು.

ಓತಿಹಾಳ ಗ್ರಾಮಸ್ಥರು ಮಾತನಾಡಿ, ಪಶು ಚಿಕಿತ್ಸಾ ಕೇಂದ್ರ ತೆರೆಯಬೇಕು. ಗ್ರಾಮದ ಉರ್ದು ಶಾಲೆಯ ಆವರಣ ಕೆರೆಗೆ ಹತ್ತಿರವಿದ್ದು, ಕೆರೆಗೆ ತಂತಿ ಬೇಲಿ ಅಳವಡಿಸಬೇಕು. ಗ್ರಾಮದ ಪ್ರೌಢಶಾಲೆ ಆವರಣಕ್ಕೂ ಕಾಂಪೌಂಡ್ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರ ಬೇಡಿಕೆಗೆ ಪಿಡಿಒ ರಾಘವೇಂದ್ರ ಚಕ್ರವರ್ತಿ ಪ್ರತಿಕ್ರಿಯಿಸಿ ಮಾತನಾಡಿ, ಈಗಾಗಲೇ ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಜಿಪಂ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕೊಡನೆಯೇ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಚಿಕ್ಕಸಿಂದಗಿ ಗ್ರಾಮಸ್ಥರು ಮಾತನಾಡಿ, ಕುಡಿಯುವ ನೀರಿನ ಘಟಕಗಳನ್ನು ಶುದ್ಧವಾಗಿಡಲು ಗ್ರಾಪಂ ಅಧಿಕಾರಿಗಳು ಕಾಳಜಿ ಮಾಡುತ್ತಿಲ್ಲ ಎಂದು ದೂರಿದರು. ಕೋರವಾರ ಬ್ರಾೃಂಚ್ ಕಾಲುವೆಯ ಕಾಮಗಾರಿ ಪೂರ್ಣಗೊಳಿಸುವಲ್ಲಿ ಶಾಸಕರು ಕೂಡಲೇ ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು.

ಕೃಷಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಚಂದ್ರಶೇಖರ ಪವಾರ ಮಾತನಾಡಿ, ರೈತರಿಗೆ ಕೇಂದ್ರದ ಪಿಎಂಎ್ಎಂಇ ಯೋಜನೆಯಡಿ ರಾಜ್ಯ ಮತ್ತು ಕೇಂದ್ರದ ಶೇ.35 ಹಾಗೂ ರಾಜ್ಯದ ಶೇ.15 ರಷ್ಟು ಆರ್ಥಿಕ ಸಹಾಯವನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗುತ್ತಿದೆ. ರೈತರು ಯಾವುದೇ ಆಹಾರ ಉತ್ಪಾದನೆ, ಬೆಳೆಗಳ ವ್ಯಾಪಾರಕ್ಕೆ ಶೇ.50 ರಷ್ಟು ಸಹಾಯಧನದೊಂದಿಗೆ ಅಂದಾಜು 50 ಸಾವಿರ ರೂ.ದಿಂದ 3 ಕೋಟಿ ರೂ. ವರೆಗೂ ಸಾಲ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಶೈಲಜಾ ಸ್ಥಾವರಮಠ (ಮೊ. 9972435327) ಅವರನ್ನು ಸಂಪರ್ಕಿಸಲು ಹೇಳಿದರು.

ತಾಪಂ ಇಒ ರಾಮು ಅಗ್ನಿ, ತಹಸೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ, ಗ್ರಾಪಂ ಅಧ್ಯಕ್ಷ ಯಮನಪ್ಪ ಹೊಸಮನಿ, ಉಪಾಧ್ಯಕ್ಷೆ ಸರೋಜಿನಿ ನಾಗಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀಶೈಲ ಕವಲಗಿ, ಬಿಸಿಯೂಟ ಯೋಜನೆಯ ಎಡಿ ಮಹೇಶ ಡೋಣೂರ, ನರೇಗಾ ಎಡಿ ನಿತ್ಯಾನಂದ ಯಲಗೋಡ, ಪಿಡಿಒ ರಾಘವೇಂದ್ರ ಚಕ್ರವರ್ತಿ, ತಾಲೂಕು ಮಟ್ಟದ ಅಧಿಕಾರಿಗಳು, ಶಾಲಾ ಶಿಕ್ಷಕರು, ಸಾರ್ವಜನಿಕರು ಇತರರಿದ್ದರು.

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…