More

    ಅತ್ತ ಓಟು, ಇತ್ತ O2! ಮೆಡಿಕಲ್​ ಥ್ರಿಲ್ಲರ್​ನಲ್ಲಿ ಆಶಿಕಾ ರಂಗನಾಥ್​ ಮಿಂಚು

    ವಿಜಯವಾಣಿ ಸುದ್ದಿಜಾಲ ಬೆಂಗಳೂರು:

    ರಾಘವ್​ ನಾಯಕ್​ ಮತ್ತು ಪ್ರಶಾಂತ್​ ರಾಜ್​ ಜಂಟಿಯಾಗಿ ಆ್ಯಕ್ಷನ್​&ಕಟ್​ ಹೇಳಿರುವ ಮೆಡಿಕಲ್​ ಥ್ರಿಲ್ಲರ್​ ಸಿನಿಮಾ “O2′. ಅಶ್ವಿನಿ ಪುನೀತ್​ ನಿರ್ಮಿಸಿರುವ ಈ ಚಿತ್ರಕ್ಕೆ ಆಶಿಕಾ ರಂಗನಾಥ್​ ನಾಯಕಿಯಾಗಿದ್ದು, ಇತ್ತೀಚೆಗಷ್ಟೆ ಟ್ರೇಲರ್​ ರಿಲಿಸ್​ ಮಾಡಲಾಗಿದೆ.

    ಅತ್ತ ಓಟು, ಇತ್ತ O2! ಮೆಡಿಕಲ್​ ಥ್ರಿಲ್ಲರ್​ನಲ್ಲಿ ಆಶಿಕಾ ರಂಗನಾಥ್​ ಮಿಂಚು

    ನಿರ್ದೇಶಕ ರಾಘವ್​, “ಇದೊಂದು ಕುತೂಹಲಕಾರಿ ಮೆಡಿಕಲ್​ ಥ್ರಿಲ್ಲರ್​. ಹಾಗಂತ ಕಥೆಯಲ್ಲಿ ಕೇವಲ ಥ್ರಿಲ್ಲರ್​ ಅಂಶಗಳಷ್ಟೇ ಅಲ್ಲ, ಪ್ರೀತಿ-ಪ್ರೇಮವೂ ಇರಲಿದೆ. ಹೀಗಾಗಿ ಇದನ್ನು ಒಂದು ರೊಮ್ಯಾಂಟಿಕ್​ ಥ್ರಿಲ್ಲರ್​ ಸಿನಿಮಾ ಎನ್ನಬಹುದು’ ಎಂದು ಹೇಳಿಕೊಳ್ಳುತ್ತಾರೆ. ಸಾಯುತ್ತಿರುವವರನ್ನು ಬದುಕಿಸುವುದೇ ವೈದ್ಯರ ಕರ್ತವ್ಯ ಎಂದು ನಂಬುವ ಶ್ರದ್ಧಾ ಎಂಬ ವೈದ್ಯೆಯ ಪಾತ್ರದಲ್ಲಿ ಆಶಿಕಾ ಕಾಣಿಸಿಕೊಳ್ಳಲಿದ್ದಾರೆ. ತನ್ನ ಸಂಶೋಧನೆಯ ಫಲವಾದ “O2′ ಎಂಬ ಔಷಧದ ಮೂಲಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸಲು ಶ್ರದ್ಧಾ ಮುಂದಾಗುತ್ತಾಳೆ. ಈ ಹಾದಿಯಲ್ಲಿ ಆಕೆ ಎದುರಿಸುವ ಸಮಸ್ಯೆಗಳೇನು? ಶ್ರದ್ಧಾ ಗುರಿ ತಲುಪುತ್ತಾಳಾ? ಎಂಬುದೇ ಚಿತ್ರದ ಒನ್​ಲೈನ್​.

    ಅತ್ತ ಓಟು, ಇತ್ತ O2! ಮೆಡಿಕಲ್​ ಥ್ರಿಲ್ಲರ್​ನಲ್ಲಿ ಆಶಿಕಾ ರಂಗನಾಥ್​ ಮಿಂಚು

    ಆಶಿಕಾ ರಂಗನಾಥ್​ ಜತೆ ಪ್ರವಿಣ್​ ತೇಜ್​, ರಾವ್​ ನಾಯಕ್​, ಸಿರಿ ರವಿಕುಮಾರ್​, ಪ್ರಕಾಶ್​ ಬೆಳವಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೇ ಏ. 19ರಂದು ಸಿನಿಮಾ ತೆರೆಗೆ ಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts