ಬೆಂಗಳೂರು: ರ್ಯಾಂಬೋ-2 ಚಿತ್ರದ ಚುಟು ಚುಟು ಹಾಡಿನ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿರುವ ಹಾಗೂ ಸ್ಯಾಂಡಲ್ವುಡ್ನ ಮಿಲ್ಕಿ ಬ್ಯೂಟಿ ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ನಟಿ ಆಶಿಕಾ ರಂಗನಾಥ್ ತಮ್ಮ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಫೋಟೋ ಇದೀಗ ವೈರಲ್ ಆಗಿದೆ.
ಜಿಮ್ನಲ್ಲಿ ಕಸರತ್ತು ಮಾಡುತ್ತಿರುವ ಫೋಟೋವನ್ನು ನವೆಂಬರ್ 11ರಂದು ಆಶಿಕಾ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅದಕ್ಕೆ “ವಾರಾಂತ್ಯದ ಮದುವೆ ಭೋಜನದ ಬಳಿಕ ಮರಳಿ ಜಿಮ್”ಗೆ ಎಂದು ಬರೆದುಕೊಂಡಿದ್ದಾರೆ. ಪುಶ್-ಅಪ್ ಮಾಡುತ್ತಿರುವ ಭಂಗಿಯಲ್ಲಿ ಆಶಿಕಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಸದ್ಯ ಫೋಟೋ ವೈರಲ್ ಆಗಿದ್ದು ಆಶಿಕಾ ಹಾಟ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದು, ಅನೇಕ ಮಂದಿ ರೀಟ್ವೀಟ್ ಮಾಡಿದ್ದಾರೆ. ಆಶಿಕಾರ ಫಿಟ್ನೆಸ್ ಕಾಳಜಿಗೆ ಮನಸೋತಿರುವ ಹಲವರು ಮೆಚ್ಚುಗೆ ಸೂಚಿಸಿ, ಅವರ ಸಿನಿ ಕೆರಿಯರ್ಗೆ ಶುಭ ಹಾರೈಸಿದ್ದಾರೆ.
ಆಶಿಕಾ ಸದ್ಯ ಅವತಾರ್ ಪುರುಷ ಚಿತ್ರದಲ್ಲಿನ ನಟ ಶರಣ್ಗೆ ಮತ್ತೊಮ್ಮೆ ನಾಯಕಿಯಾಗಿದ್ದಾರೆ. ಇದೇ ಜೋಡಿ ರ್ಯಾಂಬೋ-2 ಚಿತ್ರದಲ್ಲಿ ಮೋಡಿ ಮಾಡಿತ್ತು.
After the weekend wedding food.. back to gym! 🙈🙆♀️👻 #plank #absworkout #corestrenthening pic.twitter.com/trRXyHe8db
— Ashika Ranganath (@AshikaRanganath) November 11, 2019