49ನೇ ಜನ್ಮದಿನದಂದು ರಾಹುಲ್ ದ್ರಾವಿಡ್‌ಗೆ ಎದುರಾಯಿತು ಕಸಿವಿಸಿ!

ಕೇಪ್‌ಟೌನ್: ಟೀಮ್ ಇಂಡಿಯಾ ಕೋಚ್ ಹಾಗೂ ದಿಗ್ಗಜ ರಾಹುಲ್ ದ್ರಾವಿಡ್‌ಗೆ ಮಂಗಳವಾರ 49ನೇ ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು, ಮಾಜಿ ಸಹ-ಆಟಗಾರರು, ಗೆಳೆಯರಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯಾಯಿತು. ಆದರೆ ದ್ರಾವಿಡ್ ಜನ್ಮದಿನದಂದು ತಮಗೆ ಎದುರಾಗುವ ಕಸಿವಿಸಿಯ ಬಗ್ಗೆ ಕೇಪ್‌ಟೌನ್ ಟೆಸ್ಟ್ ಆರಂಭಕ್ಕೆ ಮುನ್ನ ಮಾತನಾಡಿದರು. ‘ವಯಸ್ಸಾಗುತ್ತಿದ್ದಂತೆ ಜನ್ಮದಿನವನ್ನು ಯಾವ ರೀತಿ ಅನುಭವಿಸಬೇಕು ಎಂದು ಗೊತ್ತಾಗುವುದಿಲ್ಲ. ಯಾಕೆಂದರೆ ಒಂದು ವರ್ಷ ಹಿರಿಯರಾಗಿರುತ್ತೇವೆ’ ಎಂದು ದ್ರಾವಿಡ್ ಹೇಳಿದರು. ಈ ಮೂಲಕ ತಮಗೆ ವಯಸ್ಸಾಗುತ್ತಿದೆ ಎಂದು ದ್ರಾವಿಡ್ ತಮಾಷೆಯಾಗಿ ಹೇಳಿಕೊಂಡರು. … Continue reading 49ನೇ ಜನ್ಮದಿನದಂದು ರಾಹುಲ್ ದ್ರಾವಿಡ್‌ಗೆ ಎದುರಾಯಿತು ಕಸಿವಿಸಿ!