ಸ್ಮಶಾನ ನಿರ್ವಾಹಕರೆಂದು ನೇಮಕ ಮಾಡಿಕೊಳ್ಳಿ

ಹಗರಿಬೊಮ್ಮನಹಳ್ಳಿ: ರುದ್ರಭೂಮಿ ನಿರ್ವಾಹಕರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಮಸಣ ಕಾರ್ಮಿಕರ ಸಂಘದ ತಾಲೂಕು ಘಟಕ ಪಟ್ಟಣದ ತಾಪಂ ಕಚೇರಿ ಮುಂದೆ ಶನಿವಾರ ಧರಣಿ ನಡೆಸಿತು.

ಸಂಘದ ರಾಜ್ಯ ಸಂಚಾಲಕಿ ಬಿ.ಮಾಳಮ್ಮ ಮಾತನಾಡಿ, ಮಸಣ ಕಾರ್ಮಿಕರು ಹಲವು ವರ್ಷಗಳಿಂದ ಬಿಟ್ಟಿ ಕೆಲಸ ಮಾಡುತ್ತಿದ್ದು, ಅನ್ಯಾಯ ಸರಿಪಡಿಸಿ ನ್ಯಾಯ ಒದಗಿಸುವಂತೆ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ಸ್ಪಂದಿಸುತ್ತಿಲ್ಲ. ಈಗಲಾದರೂ ಮಸಣ ಕಾರ್ಮಿಕರ ಹಕ್ಕೊತ್ತಾಯಗಳನ್ನು ಸರ್ಕಾರ ಪರಿಗಣಿಸಬೇಕು.

ಪ್ರತಿ ಸಾರ್ವಜನಿಕ ಸ್ಮಶಾನಕ್ಕೆ ಒಬ್ಬರಂತೆ ಸ್ಥಳೀಯ ಸಂಸ್ಥೆಗಳು ಮಸಣ ನಿರ್ವಾಹಕರೆಂದು ನೇಮಿಸಿಕೊಳ್ಳಬೇಕು. ಕನಿಷ್ಠ 3 ಸಾವಿರ ರೂ. ಕೂಲಿ ಪಾವತಿಸುವಂತೆ ಕ್ರಮ ವಹಿಸಬೇಕು. ಅಗತ್ಯ ಪರಿಕರಗಳನ್ನು ಒದಗಿಸಬೇಕು. 65 ವರ್ಷ ಮೇಲ್ಪಟ್ಟ ಮಸಣ ಕಾರ್ಮಿಕರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿಯಾಗಿ ಕನಿಷ್ಠ 3 ಸಾವಿರ ರೂ. ಘೋಷಿಸಬೇಕು.

ಸ್ಥಳೀಯ ಸಂಸ್ಥೆಗಳನ್ನು ಮಾಲೀಕರನ್ನಾಗಿಸಿ ಮಸಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೊಳಿಸಬೇಕು. ಮಸಣ ಕಾರ್ಮಿಕರಿಗೆ ತಲಾ 5 ಎಕರೆ ಜಮೀನು ಉಚಿತವಾಗಿ ನೀಡಬೇಕು. ಹಿತ್ತಲು ಹಾಗೂ ನಿವೇಶನ ಸಹಿತ 10 ಲಕ್ಷ ಮೌಲ್ಯದ ಮನೆಯನ್ನು ಉಚಿತವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂಘದ ತಾಲೂಕು ಸಂಚಾಲಕ ಹುಲುಗಪ್ಪ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಚಾಂದ್‌ಬೀ, ಮಸಣ ಕಾರ್ಮಿಕರಾದ ಬಿ.ಮಹೇಂದ್ರ, ಗವಿಸಿದ್ದಪ್ಪ, ಹುಡುಚಪ್ಪ, ಲಕ್ಷ್ಮಣ, ಮಂಜುನಾಥ, ಕೆಂಚಪ್ಪ ಇತರರಿದ್ದರು.

Share This Article

ಬೆನ್ನುನೋವಿಗೆ ರಾಮಬಾಣ ಫಿಸಿಯೋಥೆರಪಿ: ಪಾರ್ಶ್ವವಾಯು, ಅಂಗವೈಕಲ್ಯ ಸಮಸ್ಯೆಗೂ ಇದೆ ಪರಿಹಾರ

| ಹರೀಶ್ ಬೇಲೂರು ಬೆಂಗಳೂರು ಆರೋಗ್ಯ ರಕ್ಷಣೆಯಲ್ಲಿ ಭೌತಚಿಕಿತ್ಸಕರ (ಫಿಸಿಯೋಥೆರೆಪಿಸ್ಟ್) ಕೊಡುಗೆ ಕುರಿತು ಜಾಗೃತಿ ಮೂಡಿಸಲು,…

ಎಂತಹ ಕೊಬ್ಬನ್ನು ಯಾವ ರೀತಿಯಲ್ಲಿ ಸೇವಿಸುವುದು ಆರೋಗ್ಯಕರ?

ಕೊಬ್ಬು ಎಂದರೆ ಮೂಗು ಮುರಿಯುವುದು ಹಲವರಿಗೆ ರೂಢಿಯಾಗಿಬಿಟ್ಟಿದೆ. ಆದರೆ ಒಳ್ಳೆಯ ಕೊಬ್ಬು ನಮ್ಮ ದೇಹದಲ್ಲಿ ಹಲವಾರು…

ಬೆಳಿಗ್ಗೆ ಈ ಹಣ್ಣುಗಳನ್ನು ತಿಂದರೆ ಸಾಕು…ಆರೋಗ್ಯ ಸಮಸ್ಯೆಗಳೆಲ್ಲಾ ದೂರವಾಗುತ್ತವೆ

ಬೆಂಗಳೂರು: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ವೈದ್ಯರು ಕೂಡ ಹಣ್ಣುಗಳನ್ನು…