ಸಂಸತ್ತಿನಲ್ಲಿ ಭಾರತ್​ ಮಾತಾ ಕೀ ಜೈ ಎಂದು ಕೂಗಿದ ಬಿಜೆಪಿ ಸಂಸದರಿಗೆ ಒವೈಸಿ ಪ್ರತಿಕ್ರಿಯೆ ಹೀಗಿತ್ತು…

ನವದೆಹಲಿ: ನಿನ್ನೆ ಪಶ್ಚಿಮಬಂಗಾಳದ ಸಂಸದರು ಲೋಕಸಭಾ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಜೈ ಶ್ರೀರಾಮ್ ಎಂದು ಕೂಗಲಾಗಿತ್ತು. ಅಂತೆಯೇ ಇವತ್ತು ಹೈದರಾಬಾದ್​ ಎಂಪಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಒವೈಸಿ ಪ್ರಮಾಣ ವಚನ ಸ್ವೀಕಾರ ಮಾಡಲು ಆಗಮಿಸುತ್ತಿದ್ದಂತೆ ಭಾರತ್​ ಮಾತಾ ಕೀ ಜೈ, ವಂದೇ ಮಾತರಂ ಎಂದು ಬಿಜೆಪಿ ಸಂಸದರು ದೊಡ್ಡದಾಗಿ ಕೂಗಲು ಪ್ರಾರಂಭಿಸಿದರು.

ಆದರೆ, ಇದಕ್ಕೆ ಒವೈಸಿ ಪ್ರತಿಕ್ರಿಯೆ ಕೊಂಚ ವಿಭಿನ್ನವಾಗಿತ್ತು. ಬಿಜೆಪಿ ಸಂಸದರೆಲ್ಲ ಭಾರತ್​ ಮಾತಾ ಕೀ ಜೈ ಎನ್ನುತ್ತಿದ್ದರೆ ನಗುತ್ತಲೇ ಅವರನ್ನು ಅಭಿನಂದಿಸಿದ ಒವೈಸಿ ಪ್ರಮಾಣ ವಚನ ಸ್ವೀಕರಿಸಿದರು. ಅದಾದ ಬಳಿಕ ಜೈ ಮೀಮ್​, ಜೈ ಭೀಮ್​, ತಕ್ಬೀರ್​ ಅಲ್ಲಾಹು ಅಕ್ಬರ್​, ಜೈ ಹಿಂದ್​ ಎಂದು ಹೇಳಿದರು.

ನಂತರ ಪಾರ್ಲಿಮೆಂಟ್ ರೆಜಿಸ್ಟರ್​ನಲ್ಲಿ ಸಹಿ ಮಾಡುವುದನ್ನು ಮರೆತರು. ಬಳಿಕ ನೆನಪಿಸಿಕೊಂಡು ಬಂದು ಸಹಿ ಮಾಡಿದರು.

ನಂತರ ಸಂಸತ್ತಿನ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನನ್ನನ್ನು ನೋಡಿದ ಕೂಡಲೇ ಬಿಜೆಪಿ ಸಂಸದರಿಗೆ ಇಂಥದ್ದೆಲ್ಲ ನೆನಪಾಗುತ್ತದೆ. ನೋಡಲು, ಕೇಳಲು ನನಗೂ ಖುಷಿಯಾಗುತ್ತದೆ. ಆದರೆ, ಅವರು ಸಂವಿಧಾನವನ್ನು ನೆನಪಿಸಿಕೊಳ್ಳಲಿ. ಬಿಹಾರದ ಮುಜಾಫರ್​ ನಗರದಲ್ಲಿ ಮಿದುಳಿನ ಉರಿಯೂತದಿಂದ ಮಕ್ಕಳು ಸಾವನ್ನಪ್ಪುತ್ತಿರುವುದನ್ನು ನೋಡಲಿ ಎಂದು ಹೇಳಿದರು.

Leave a Reply

Your email address will not be published. Required fields are marked *