ಎನ್​ಆರ್​ಐ ಬಿ.ಆರ್.​ ಸತೀಶ್​ಗೆ ಆರ್ಯಭಟ ಇಂಟರ್ ನ್ಯಾಷನಲ್ ಅವಾರ್ಡ್ ಪ್ರದಾನ

ದೋಹಾ (ಕತಾರ್): ತಾಯ್ನಾಡಿನಿಂದ ದೂರವಿದ್ದರೂ, ಅಲ್ಲಿದ್ದುಕೊಂಡೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಿ.ಆರ್ ಸತೀಶ್ ಎಂಬುವವರ ಸೇವೆಯನ್ನು ಗುರುತಿಸಿ ಆರ್ಯಭಟ ಇಂಟರ್ ನ್ಯಾಷನಲ್ ಅವಾರ್ಡ್ ನೀಡಿ ಅಭಿನಂದಿಸಲಾಗಿದೆ.

ಮೂಲತಃ ಬೆಂಗಳೂರಿನವರಾದ ಬಿ. ಆರ್ ಸತೀಶ್, ಹಲವಾರು ವರ್ಷಗಳಿಂದ ಕತಾರ್​ನಲ್ಲಿ ವಾಸಿಸುತ್ತಿದ್ದು, ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಘಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಸತೀಶ್​, ‘ಬದುಕು ಹಾಗೂ ಬದುಕಲು ಬಿಡು’ ಎಂಬ ಧ್ಯೇಯವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.

ಇವರು ವಿಶೇಷವಾಗಿ ಸಂಘಟಕರನ್ನು ಪ್ರೋತ್ಸಾಹಿಸುವುದರೊಂದಿಗೆ ತನ್ನಿಂದಾಗುವ ಸಹಾಯವನ್ನು ಮಾಡುತ್ತಾರೆ. ಅನಿವಾಸಿ ಭಾರತೀಯರ ಪ್ರತಿಭೆ ಗುರುತಿಸಿ ಅವರನ್ನು ಬೆಂಬಲಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *